ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಶತಮಾನದ ವೈಭವದ ಬ್ರಹ್ಮಕಲಶಾಭಿಷೇಕ

12:01 PM, Sunday, February 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

kudupu ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಸಮಗ್ರವಾಗಿ ೯ ಕೋಟಿ ರುಪಾಯಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಈ ಶತಮಾನದಲ್ಲಿ ಕಂಡರಿಯದ ವಿಶೇಷವಾದ ಬ್ರಹ್ಮಕಲಶಾಭಿಷೇಕವು ಶ್ರೀ ಅನಂತಪದ್ಮನಾಭ ದೇವರಿಗೆ ಪೂರ್ವಾಹ್ನ 6.45 ರಿಂದ 7.45 ರ ಸಮಯ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತ್ತು.

ಮುಂಜಾನೆ ನಾಲ್ಕು ಗಂಟೆಯಿಂದ ಶ್ರೀ ದೇವರಿಗೆ ಕಲಶಾಭಿಷೇಕ ಪ್ರಾರಂಭಗೊಂಡು ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆಯ ಕೊನೆಯ ಭಾಗವಾದ ಪ್ರಧಾನ ಚಿನ್ನದ ಕಲಶದಲ್ಲಿರುವ ಮಹಾಬ್ರಹ್ಮಕಲಶವನ್ನು ಪೂರ್ವಾಹ್ನ ಶ್ರೀ ದೇವರಿಗೆ ಅಭಿಷೇಕ ಮಾಡಿದಾಗ ಭಕ್ತ ಜನರ ವೇದಘೋಷ ಮುಗಿಲುಮುಟ್ಟಿತು.

ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಜರಗಿದ ನಂತರ ಪ್ರಸನ್ನಪೂಜೆ, ಅವಸ್ರುತೋಕ್ಷಾಬಲಿ, ಪ್ರಸಾದವಿತರಣೆ, ಮಹಾಮಂತ್ರಾಕ್ಷತೆ ಜರಗಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಮುಕ್ತೇಸರರಾದ ಭಾಸ್ಕರ ಕೆ., ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಕೃಷ್ಣರಾಜ ತಂತ್ರಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಗೌರವಾಧ್ಯಕ್ಷರಾದ ಚಂದ್ರಹಾಸ್ ರೈ, ಅಧ್ಯಕ್ಷರಾದ ಸುದರ್ಶನ ಕುಡುಪು, ಅನುವಂಶಿಕ ಮುಕ್ತೇಸರರು ಹಾಗೂ ಅರ್ಚಕರಾದ ಶ್ರೀ ಪಿ. ಅನಂತ ಭಟ್, ಉಪಾಧ್ಯಕ್ಷರಾದ ಕೆ. ಮನೋಹರ ಭಟ್, ಅನುವಂಶಿಕ ಮುಕ್ತೇಸರರಾದ ಕೆ. ಬಾಲಕೃಷ್ಣ ಕಾರಂತ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿಯ ಸದಸ್ಯರು, ಅನ್ನ ಸಂತರ್ಪಣೆ ಸಮಿತಿಯ ಪ್ರಧಾನ ಸಂಚಾಲಕರಾದ ಶೆಡ್ಡೆ ಮಂಜುನಾಥ ಭಂಡಾರಿ, ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕರಾದ ಮಹಾಬಲ ಪೂಜಾರಿ ಕಡಂಬೋಡಿ ಹಾಗೂ ಎಲ್ಲಾ ಉಪಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.

ಪೂರ್ವಾಹ್ನ10.30 ಕ್ಕೆ ಸರ್ವಾಭರಣ ಪೋಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಬ್ರಹ್ಮಕಲಶದ ವಿಶೇಷ ಮಹಾಪೂಜೆ ಜರಗಿತು. ಕ್ಷೇತ್ರಕ್ಕೆ ಸುಮಾರು ಒಂದು ಲಕ್ಷದಷ್ಟು ಭಕ್ತರು ಆಗಮಿಸಿ ಬ್ರಹ್ಮಕಲಶಾಭಿಷೇಕದ ಮಹಾ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ವಿಶೇಷ ಪೂಜೆ ನಿತ್ಯಬಲಿ ಆಗಿ ಅನ್ನಛತ್ರದಲ್ಲಿ ಪಲ್ಲಪೂಜೆ .ಜರಗಿತು ಈ ವೇಳೆ ಸುಮಾರು ಆರು ಸಹಸ್ರಕ್ಕೂ ಮಿಕ್ಕ ಭಕ್ತರು ಮಧ್ಯಾಹ್ನದ ಅನ್ನ ಪ್ರಸಾದ ಸ್ವೀಕರಿಸಿದರು. ಪ್ರಧಾನ ಶ್ರೀ ಪದ್ಮನಾಭ ವೇದಿಕೆಯಲ್ಲಿ ಚೆನ್ನೈನ ಉದಯಾಲೂರ್, ಡಾ. ಕಲ್ಯಾಣರಾಮ ಭಾಗವತರ ಸಂಪ್ರದಾಯಿಕ ಭಜನಾ ನಾಮ ಸಂಕೀರ್ತನೆ, ಭಕ್ತಿ ಸಂಗೀತ ರಸಮಂಜರಿ, ರಾತ್ರಿ ಆಳ್ವಾಸ್ ವಿದ್ಯಾ ಸಂಸ್ಥೆಯ ಮಕ್ಕಳಿಂದ ಆಳ್ವಾಸ್ ಸಾಂಸ್ಕೃತಿಕ ವೈವಿದ್ಯ ಜರಗಿತು. ರಾತ್ರಿ ಶ್ರೀ ದೇವರಿಗೆ ಮಹಾ ಪೂಜೆ ಜರಗಿ ವೈಭವದ ಉತ್ಸವ ಬಲಿ ಜರಗಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English