ಬೆಳ್ತಂಗಡಿ: ಸಾವಿರಾರು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಬರುತ್ತಿದ್ದ ಐತಿಹಾಸಿಕ ಪ್ರವಾಸಿ ತಾಣವಾದ ಜಮಾಲಾಬಾದ್ ಕೋಟೆಗೆ ಪ್ರವೇಶ ನಿರಾಕರಿಸಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಕೋಟೆಗೆ ಬೀಗ ಜಡಿದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಕೋಟೆ ಇರುವ ಜಮಾಲಾಬಾದ್ ಕೋಟೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು, ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ, ಈಗ ಪ್ರಕೃತಿ ಸೌಂದರ್ಯ ಸವಿಯಲು ಕೋಟೆಗೆ ಬರುತ್ತಿದ್ದ ಪ್ರವಾಸಿಗರ ಆಸೆಗೆ ಅಡ್ಡಿ ಉಂಟಾಗಿದೆ.
ಪ್ರಾಚ್ಯ ವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ವನ್ಯಜೀವಿ ಅರಣ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿರುವ ಇತಿಹಾಸ ಪ್ರಸಿದ್ಧ ಜಮಾಲಾಬಾದ್ ಕೋಟೆಗೆ ಅರಣ್ಯ ಇಲಾಖೆಯಿಂದ ಏಕಪಕ್ಷೀಯವಾಗಿ ಪ್ರವೇಶ ನಿರಾಕರಣೆ ಮಾಡಿದ್ದಾರೆ.
ಕೋಟೆಯು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಕೋಟೆಯ ಸುತ್ತ ಮುತ್ತಲ ಪ್ರವೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತಿದೆ. ಪ್ರವಾಸಿಗರು ಒಣಹುಲ್ಲಿಗೆ ಬೆಂಕಿ ಹಚ್ಚಿ ನಾಶ ಪಡಿಸುತ್ತಾರೆ ಎಂಬ ಕಾರಣ ನೀಡಿ ಐತಿಹಾಸಿಕ ಪ್ರವಾಸಿ ತಾಣ ಜಮಾಲಾಬಾದ್ ಕೋಟೆಗೆ ವನ್ಯಜೀವಿ ಅರಣ್ಯ ಇಲಾಖೆಯಿಂದ ಏಕಪಕ್ಷೀಯವಾಗಿ ಪ್ರವೇಶ ನಿರಾಕರಣೆ ಮಾಡಲಾಗಿದೆ.
Click this button or press Ctrl+G to toggle between Kannada and English