ಮಂಗಳೂರು: ನಭೋಮಂಡಲದ ವಿಸ್ಮಯಗಳನ್ನು ಪ್ರದರ್ಶಿಸಲು ಮಂಗಳೂರಿನಲ್ಲಿ ಅಪರೂಪದ ತಾರಾಲಯವೊಂದು ನಿರ್ಮಾಣಗೊಂಡಿದೆ. ಇದು ದೇಶದಲ್ಲಿಯೇ ಪ್ರಥಮವಾಗಿರುವ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ 3ಡಿ ತಾರಾಲಯ. ಭಾರತದ ಮೊದಲ 3ಡಿ 8ಕೆ ಯುಎಚ್ ಡಿ ಹೈಬ್ರಿಡ್ ತಂತ್ರಜ್ಞಾನದ ತಾರಾಲಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.
ಮಂಗಳೂರು ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯ ಭಾರತದ ಪ್ರಥಮ 3ಡಿ ತಾರಾಲಯವಾಗಿದೆ. ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನದಿಂದ ನಿರ್ಮಾಣವಾಗಿದೆ.
ಸ್ವಾಮಿ ವಿವೇಕಾನಂದ ತಾರಾಲಯವು 18 ಮೀಟರ್ ವ್ಯಾಸದಷ್ಟು ದೊಡ್ಡದಿದ್ದು, ಆಧುನಿಕ ತಂತ್ರಜ್ಞಾನದ ನ್ಯಾನೋಸೀಮ್ ಡೂಮ್ ಅನ್ನು 15 ಡಿಗ್ರಿ ಕೋನದಲ್ಲಿ ಇರಿಸಲಾಗಿದೆ. ಅಪ್ಟೋ- ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, 3ಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಈ ತಾರಾಲಯದಲ್ಲಿ ಸುಮಾರು 170 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ದೇಶದಲ್ಲಿ ಈ ತರಹದ ಸೌಲಭ್ಯಗಳುಳ್ಳ 3ಡಿ ತಾರಾಲಯವನ್ನು ಹೊಂದಿದ ಪ್ರಥಮ ನಗರವಾಗಲಿದೆ ಮಂಗಳೂರು. ಪ್ರಪಂಚದಲ್ಲಿ 20 3ಡಿ ತಂತ್ರಜ್ಞಾನ ಹೊಂದಿರುವ ತಾರಾಲಯಗಳಿದ್ದು, ಯುರೋಪ್ ಖಂಡದಲ್ಲಿ ಮೊದಲನೆಯದಾಗಿ ಹೆವೆನ್ಸ್ ಆಫ್ ಕೊಪರ್ನಿಕಸ್ ರೀತಿಯ 3ಡಿ ತಂತ್ರಜ್ಞಾನ ಹೊಂದಿದ ತಾರಾಲಯವಾಗಿದೆ.
Click this button or press Ctrl+G to toggle between Kannada and English