ಬಿಜೆಪಿಯವರು ವೋಟಿಗಾಗಿ ರಾಮಭಕ್ತರು, ನಾವು ನೈಜ ರಾಮಭಕ್ತರು: ರಮಾನಾಥ್‌ ರೈ

5:49 PM, Tuesday, February 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ramanath-raiಮಂಗಳೂರು: ಬಿಜೆಪಿಯವರು ಅನ್ಯಧರ್ಮವನ್ನು ದ್ವೇಷ ಮಾಡುವ ಭಾಷಣ ಮಾಡಿ ಸುಲಭವಾಗಿ ಹಿಂದೂ ಮುಖಂಡರಾಗುತ್ತಾರೆ. ಆದರೆ ಹಿಂದೂ ಧರ್ಮಕ್ಕೆ ಒಂದು ಪೈಸೆ ದೇಣಿಗೆ ನೀಡುವುದಿಲ್ಲ ಎಂದು ಸಚಿವ ರಮಾನಾಥ ರೈ ಹೇಳಿಕೆ ನೀಡಿದ್ದಾರೆ.

ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವ ರೈ, ಬಿಜೆಪಿಯವರು ವೋಟಿಗಾಗಿ ರಾಮಭಕ್ತರಾಗಿದ್ದಾರೆ. ಆದರೆ ಕಾಂಗ್ರೆಸ್‌ನವರು ನೈಜ ರಾಮಭಕ್ತರು. ನಾನು ಪ್ರತಿದಿನ ರಾಮಯಣದ ಶ್ಲೋಕವನ್ನು ಹೇಳಿಯೇ ದಿನಚರಿ ಆರಂಭಿಸುತ್ತೇನೆ ಎಂದಿದ್ದಾರೆ.

ಬಿಜೆಪಿಯಲ್ಲಿ ಕೆಲವರು ಅನ್ಯಧರ್ಮವನ್ನು ದ್ವೇಷ ಮಾಡುವ ಭಾಷಣ ಮಾಡಿ ಸುಲಭವಾಗಿ ಹಿಂದೂ ಮುಖಂಡರಾಗುತ್ತಾರೆ. ಆದರೆ ಹಿಂದೂ ಧರ್ಮಕ್ಕಾಗಿ ಯಾರೂ ಐದು ಪೈಸೆ ದೇಣಿಗೆ ನೀಡುವುದಿಲ್ಲ, ಇತರ ಧರ್ಮಕ್ಕೆ ಬೈಯಲು ಮಾತ್ರ ಅವರಿಗೆ ಗೊತ್ತು. ಬೇರೆ ಧರ್ಮವನ್ನು ತೆಗಳುವ ಮೂಲಕ ಸುಲಭವಾಗಿ ನಾಯಕರಾಗಲು ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂದು ವೇದಿಕೆಯಲ್ಲಿ ರಾಮಾಯಣದ ಶ್ಲೋಕ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English