ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಐಕಳ ಹರೀಶ್ ಅವರಿಗೆ ಅಭಿನಂದನೆಗಳು. ನಿಜಕ್ಕೂ ಇವರು ಇಂತಹ ಪ್ರತಿಷ್ಠಿತ ಮತ್ತು ಸರ್ವೋತ್ಕೃಷ್ಟ ಹುದ್ದೆಗೆ ಅರ್ಹರು.
ಇಂತಹ ಹಲವಾರು ಬಂಟರ ಸಮ್ಮೇಳನ ಆಯೋಜಿಸಿ ಬಂಟತನದ ನಂಟು ಇನ್ನೂ ಬಲಪಡಿಸೋಣ ಎಂದು ಆಡ್‌ಲ್ಯಾಬ್ಸ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಮನ್ಮೋಹನ್ ಆರ್.ಶೆಟ್ಟಿ ತಿಳಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ರಚಿಸಲಾಗಿದ್ದ ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಘನಸಿರಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನ-2018ನ್ನು ಮನ್ಮೋಹನ್ ಶೆಟ್ಟಿ ಮತ್ತು ಶಶಿ ಮನ್ಮೋಹನ್ ದಂಪತಿ ಹಿಂಗಾರ ಅರಳಿಸಿ ಕಳಶೆಯಲ್ಲಿರಿಸಿ ತಂಡುಲ ವೃಷ್ಠಿಗೈದು ವಿಧ್ಯುಕ್ತವಾಗಿ ಸಮ್ಮೇಳನಕ್ಕೆ ಚಾಲನೆಯನ್ನಿತ್ತ ಮನ್ಮೋಹನ್ ಶೆಟ್ಟಿ ಮಾತನಾಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮ್ಮೇನದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿsಯಾಗಿದ್ದು, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ದೀಪ ಪ್ರಜ್ವಲಿಸಿ ಸಮ್ಮೇಳ ನಕ್ಕೆ ಚಾಲನೆಯನ್ನಿತ್ತರು.
ಇಂದಿನ ಈ ಜಾಗತಿಕ ಬಂಟರ ಒಕ್ಕೂಟ ಸಮಾರಂಭದಲ್ಲಿ ದೊಡ್ಡ ಸಂಖ್ಯೆಯ ಉಪಸ್ಥಿತಿ ಕಂಡು ಸಂತೋಷ ಆಗುತ್ತಿದೆ. ಅದಕ್ಕೆ ಐಕಳ ಹರೀಶ್‌ರ ಪರಿಶ್ರಮ ಮತ್ತು ಚಾಣಕ್ಷತನವೇ ಕಾರಣ. ಆದುದರಿಂದಲೇ ಐಕಳ ಹರೀಶ್ ಬಂಟ ಸಮುದಾಯಕ್ಕೆ ಸ್ವರ್ಣ ಮುರುಕುವಾಗಿದ್ದಾರೆ. ಈ ಫೆಡೇರೇಶನ್‌ನನ್ನು ಪುನರುಸ್ಥಾನಗೊಳಿಸಿದ ಕೀರ್ತಿ ಇವರದ್ದಾಗಿದೆ ಎಂದು ಪದ್ಮನಾಭ ಪಯ್ಯಡೆ ನುಡಿದರು.
ಅಜಿತ್ ಮಾಲಾಡಿ ಮಾತನಾಡಿ ಮಹಾರಾಷ್ಟ್ರ ಅಥವಾ ಮುಂಬಯಿಯಲ್ಲಿನ ಜನತೆಯೇ ದೊಡ್ಡ ಮನಸ್ಸುವುಳ್ಳವರು. ಅದರಲ್ಲೂ ಬಂಟರಂತೂ ಪ್ರೀತಿಸುವ ಹೃದಯವುಳ್ಳವರು. ಇದಕ್ಕೆ ಸಮಗ್ರ ಬಂಟ ಸಮುದಾಯದ ಸಹಕಾರ ನೀಡುವರೇ ಭರವಸೆ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌ. ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಗೌ.ಕೋಶಾಧಿಕಾರಿ ಕೊಲಾಡಿ ಬಾಲಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು. ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ದಂಪತಿಗೆ ಅಭಿನಂದನಾ ಗೌರವ ಪ್ರದಾನಿಸಿ ಶುಭಾರೈಸಲಾಗಿದ್ದು, ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಆಶಾಜ್ಯೋತಿ ರೈ ಹಾಗೂ ಪದ್ಮನಾಭ ಎಸ್.ಪಯ್ಯಡೆ ಮತ್ತು ಮಾಲಿನಿ ಪದ್ಮನಾಭ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಶೋಕ್ ಪಕ್ಕಳ ಮತ್ತು ಸನ್ನಿಧಿ ಹರೀಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.
Click this button or press Ctrl+G to toggle between Kannada and English