ದೆಹಲಿ: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ರವರೆಗೆ ಕೊಂಡೊಯ್ಯಲು ಪ್ರಮುಖ ಪಾತ್ರ ನಿರ್ವಹಿಸಿದ ಹರ್ಮನ್‌ಪ್ರೀತ್ ಕೌರ್ ಡಿಎಸ್‌ಪಿ ಆಗಿದ್ದಾರೆ.
ಹೌದು, ಮಹಿಳಾ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಮನ್‌ಪ್ರಿತ್ ಕೌರ್‌ಗೆ ಪಂಜಾಬ್ ರಾಜ್ಯ ಸರ್ಕಾರ ಉದ್ಯೋಗ ನೀಡಿತ್ತು. ಆದ್ರೆ ಇಲ್ಲಿಯವರೆಗೆ ಕೌರ್ ಉದ್ಯೋಗಕ್ಕೆ ಸೇರಲು ಸಾಧ್ಯವಾಗಿಲ್ಲ. ಕಾರಣ ಇದಕ್ಕೂ ಮೊದಲು ಉದ್ಯೋಗ ಮಾಡುತ್ತಿದ್ದ ಸಂಸ್ಥೆಯಿಂದ ಅವರಿಗೆ ರಿಲಿವಿಂಗ್ ಲೆಟರ್ ನೀಡಿಲ್ಲ. ಹೀಗಾಗಿ ಅವರು ಹೊಸ ಉದ್ಯೋಗಕ್ಕೆ ಸೇರಲು ಕಷ್ಟ ಎದರುಸಿದ್ದರು.
ಮೂರು ವರ್ಷದ ಹಿಂದೆ ಕೌರ್ ಪಶ್ಚಿಮ ರೈಲ್ವೇ ಉದ್ಯೋಗಕ್ಕೆ ಸೇರಿದ್ದು, ಐದು ವರ್ಷದ ಬಾಂಡ್ ಮೇಲೆ ಅವರು ಸಹಿ ಹಾಕಿದ್ದರು. ಮೂರು ವರ್ಷ ಸಂಪೂರ್ಣಗೊಳಿಸಿರುವ ಕೌರ್‌ಗೆ ರೈಲ್ವೆ ಅಧಿಕಾರಿ ರಿಲಿವಿಂಗ್ ಲೆಟರ್ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ನಿಯಮದ ಪ್ರಕಾರ ರಿಲಿವಿಂಗ್ ಲೆಟರ್ ಬೇಕಾದ್ರೆ 27 ಲಕ್ಷ ಹಣವನ್ನು ಕಟ್ಟುವಂತೆ ರೈಲ್ವೆ ಅಧಿಕಾರಿ ತಿಳಿಸಿದ್ದರು ಎಂದು ಕೌರ್ ತಂದೆ ಹರ್ಮೆಂದರ್ ಸಿಂಗ್ ಈ ಹಿಂದೆ ಹೇಳಿದ್ದರು.
ಇನ್ನು ಬಳಿಕ ಸಿಎಂ ಸೂಚನೆ ಮೆರೆಗೆ ಹರ್ಮನ್‌ಪ್ರೀತ್ ಕೌರ್‌ಗೆ ರೈಲ್ವೆ ಇಲಾಖೆಯಿಂದ ರಿಲಿವಿಂಗ್ ಲೆಟರ್ ನೀಡಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಕೊನೆಗೂ ಸಂಕಷ್ಟವನ್ನು ಪಾರು ಮಾಡಿದ ಹರ್ಮನ್ ಪ್ರೀತ್ ಕೌರ್ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿಪಡೆಗೊಂಡಿದ್ದಾರೆ.
ಇಂದು ಪಂಜಾಬ್ ಸಿಎಂ ಕ್ಯಾ.ಅಮರೇಂದರ್ ಸಿಂಗ್ ಮತ್ತು ಡಿಜಿಪಿ ಸುರೇಶ್ ಆರೋರಾ ನೂತನ ಡಿಎಸ್‌ಪಿ ಹರ್ಮನ್‌ಪ್ರೀತ್ ಕೌರ್ ಪೊಲೀಸ್ ಸಮವಸ್ತ್ರಕ್ಕೆ ಸ್ಟಾರ್‌ಗಳನ್ನು ಪಿನ್ ಮಾಡುವ ಮೂಲಕ ಹುದ್ದೆಯನ್ನು ಹಸ್ತಾಂತರಿಸಿದರು.
Click this button or press Ctrl+G to toggle between Kannada and English