22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಎ.ಪಿ. ಮಾಲತಿಯವರಿಗೆ ಸಮ್ಮೇಳನಕ್ಕೆ ಆಮಂತ್ರಿಸಲಾಯ್ತು

11:18 AM, Friday, March 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

malathiಪುತ್ತೂರು: ಮಾರ್ಚ್ 5,6,7,ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರಗಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣವನ್ನು ಸಮ್ಮೇಳನಾಧ್ಯಕ್ಷೆ ಎ.ಪಿ. ಮಾಲತಿಯವರಿಗೆ ನೀಡುವ ಮೂಲಕ ಅಧಿಕೃತವಾಗಿ ಸಮ್ಮೇಳನಕ್ಕೆ ಆಮಂತ್ರಿಸಲಾಯ್ತು.

ಪುತ್ತೂರಿನ ಸಾಂತ್ಯಾರಿನಲ್ಲಿರುವ ಶ್ರೀಮತಿ ಎ.ಪಿ. ಮಾಲತಿಯವರ ಸ್ವಗೃಹ ಚೇತನಾ ದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರಆಮಂತ್ರಣವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ. ರಂಗಯ್ಯ ಶೆಟ್ಟಿಗಾರ್, ಪುಸ್ತಕ ಪ್ರದರ್ಶನ ವಸ್ತು ಪ್ರದರ್ಶನ ಸಮಿತಿಯ ಸಂಚಾಲಕ ಶಿವರಾಮ ರೈ, ಹಿರಿಯ ಸಾಹಿತಿಪ್ರೊ. ವಿ.ಬಿ. ಅರ್ತಿಕಜೆ, ಜಿಲ್ಲಾ ಸಾಹಿತ್ಯ ಪರಿಷತ್ತಿನಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ. ಪುತ್ತೂರುತಾಲೂಕು ಕ.ಸಾ.ಪ ಅಧ್ಯಕ್ಷ ಬಿ. ಐತಪ್ಪ ನಾಯ್ಕ್, ಜನಾರ್ದನ ಹಂದೆ, ಪ್ರೊ. ಎ.ವಿ.ನಾರಾಯಣ, ವತ್ಸಲಾರಾಜ್ಞಿ , ಪ್ರೊ. ಎ.ಪಿ. ರಾಧಾಕೃಷ್ಣ, ಲೋಕೇಶ್ ಬಲಡ್ಕ , ಬಾಲಸುಬ್ರಹ್ಮಣ್ಯ ಮಾರಾರ್, ಪ್ರಸಾದ್ ಮೊದಲಾದವರು. ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English