ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ: ಆಳ್ವಾಸ್‌ಗೆ 116 ರ‍್ಯಾಂಕ್ ಗಳು

12:21 PM, Friday, March 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

rank-studentಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ 2017ನೆ ಸಾಲಿನ ರ‍್ಯಾಂಕ್ ಪಟ್ಟಿ ಬಿಡುಗಡೆಗೊಂಡಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳು ಒಟ್ಟು 116 ರ‍್ಯಾಂಕ್ ಪಡೆದುಕೊಂಡು ವಿಶಿಷ್ಟ ಸಾಧನೆಯನ್ನು ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಆಳ್ವಾಸ್ ಆಯುರ್ವೇದ ಪದವಿಯಲ್ಲಿ 52 ರ‍್ಯಾಂಕ್, ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 39 ರ‍್ಯಾಂಕ್, ಆಳ್ವಾಸ್ ಆಯುರ್ವೇದ ಮೆಡಿಕಲ್ ಸ್ನಾತಕೋತ್ತರ ವಿಭಾಗಕ್ಕೆ 10 ರ‍್ಯಾಂಕ್, ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ 3 ರ‍್ಯಾಂಕ್, ಆಳ್ವಾಸ್ ನರ್ಸಿಂಗ್ ಕಾಲೇಜಿಗೆ 2 ರ‍್ಯಾಂಕ್, ಆಳ್ವಾಸ್ ಹಾಸ್ಪಿಟಲ್ ಎಡ್ಮಿನಿಸ್ಟ್ರೇಶನ್ ಕಾಲೇಜಿಗೆ 1 ರ‍್ಯಾಂಕ್, ಹಾಗೂ ಆಳ್ವಾಸ್ ಫಿಜಿಯೋಥೆರಫಿ ಕಾಲೇಜಿಗೆ 9 ರ‍್ಯಾಂಕ್ ಪಡೆದು ಸಾಧನೆ ಗೈದಿದೆ ಎಂದು ತಿಳಿಸಿದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಡಾ. ವಿಷ್ಣು.ಆರ್ ರಾಜ್ಯ ಮಟ್ಟದಲ್ಲಿ 2ನೆ ರ‍್ಯಾಂಕ್ ಗಳಿಸಿದ್ದಲ್ಲದೆ ಬಿಎಎಮ್‌ಎಸ್ ಪ್ರಥಮ ವರ್ಷದಲ್ಲಿ ರಾಜ್ಯಕ್ಕೆ ತೃತೀಯ, ದ್ವಿತೀಯ ವರ್ಷದಲ್ಲಿ ತೃತೀಯ, ತೃತೀಯ ವರ್ಷದಲ್ಲಿ ಆರನೇ ಮತ್ತು ಅಂತಿಮ ವರ್ಷದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಜೊತೆಗೆ ಪ್ರತ್ಯೇಕ ವಿಷಯಾಧಾರಿತವಾಗಿ ಒಟ್ಟು 18 ರ‍್ಯಾಂಕ್ ಗಳಿಸಿದ್ದಾರೆ.

ಆಯುರ್ವೇದದ ಪ್ರತ್ಯೇಕ ವಿಷಯಗಳಲ್ಲಿ ಡಾ. ಅನುಶ್ರೀ ನಾಲ್ಕು ರ‍್ಯಾಂಕ್, ಡಾ. ರಮಿತ ಮೂರು ರ‍್ಯಾಂಕ್, ಡಾ. ಸ್ನೇಹ, ಡಾ. ಅಮಿತ ಶೆಟ್ಟಿ, ಡಾ. ರಜಿನ, ಡಾ. ಕಾವ್ಯ ತಲಾ ಎರಡು ರ‍್ಯಾಂಕ್, ಡಾ.ಸಪೂರ, ಡಾ.ಕರ್ಮಗ್ಯಾಲೆ, ಡಾ.ಆದ್ಯ, ಡಾ. ಮಿನ ಫಾತಿಮ, ಡಾ. ಖುಷ್ಬು, ಡಾ. ಲಕ್ಷ್ಮೀ, ಡಾ. ಅನುಶ್ರೀ ಎ, ಡಾ. ಅಶ್ವಿನಿ ರಿಸರ್ಚ್, ಡಾ.ಅಶ್ವತಿ, ಡಾ.ದೇವಿ ಬಿಜು, ಡಾ.ಕೃಷ್ಣ ಪ್ರಿಯ, ಡಾ.ಅಂಜಲಿ, ಡಾ. ಆರ್ಯ, ಡಾ. ಆಶಾ ಮರಿಯ, ಡಾ.ಜುಮೈಲತ್, ಡಾ.ಶ್ರೀಲಕ್ಷ್ಮೀ, ಡಾ. ಅಂಜಲಿ ಬೆನ್ನಿ, ಡಾ.ಶಾಲಿನಿ, ಡಾ.ಸ್ನೇಹಪೌಲ್ಸ್ ತಲಾ ಒಂದು ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಶೇಕಡಾ 100 ಫಲಿತಾಂಶವನ್ನು ದಾಖಲೆ ಮಾಡಿದ್ದು ಮಾತ್ರವಲ್ಲದೆ ಈ ಮೂಲಕ ಆಯುರ್ವೇದ ಕಾಲೇಜಿನ ಎಲ್ಲ 11 ವಿಭಾಗದ 52 ವಿದ್ಯಾರ್ಥಿಗಳು ಉತ್ತಮ ಮತ್ತು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪ್ರತ್ಯೇಕ ವಿಭಾಗದಲ್ಲಿ 10 ರ‍್ಯಾಂಕ್ ಪಡೆದುಕೊಂಡಿದ್ದಾರೆ.

ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನ ಸ್ನಾತಕೋತ್ತರ ವಿಭಾಗದಲ್ಲಿ ಡಾ.ರಮ್ಯ ಆರ್.ಜಿ 3ನೆ ರ‍್ಯಾಂಕ್ ಮತ್ತು ಡಾ. ಸಲೀಮಬಾನು 9ನೆ ರ‍್ಯಾಂಕ್, ಪಂಚಕರ್ಮ ಸ್ನಾತಕೋತ್ತರ ವಿಭಾಗದಲ್ಲಿ ಡಾ. ವಿದ್ಯಾ ಪಿ 3ನೆ ರ‍್ಯಾಂಕ್, ಶರೀರ ರಚನಾ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಚೈತ್ರ ಶೆಟ್ಟಿ 4ನೆ ರ‍್ಯಾಂಕ್ ಮತ್ತು ಡಾ. ಸಿನಿ ಆರ್ 5ನೆ ರ‍್ಯಾಂಕ್, ಅಗದ ತಂತ್ರ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಶಿಧಿನ್.ಕೆ. ಕೃಷ್ಣನ್ 5ನೆ ರ‍್ಯಾಂಕ್, ಮತ್ತು ಡಾ. ಪಾರ್ವತಿ ರವಿ ಕುಮಾರ್ 6ನೆ ರ‍್ಯಾಂಕ್ ಮತ್ತು ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಡಾ. ರೂಪ ರಾಣಿ 10ನೆ ರ‍್ಯಾಂಕ್, ಕೌಮಾರ ಭೃತ್ಯ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಧನ್ಯಾ 5ನೆ ರ‍್ಯಾಂಕ್ ಮತ್ತು ಡಾ. ಜಿತೇಶ್ ಚೌಟ 8ನೆ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜು ಒಟ್ಟು 39 ರ‍್ಯಾಂಕ್ ಗಳನ್ನು ಪಡೆದುಕೊಂಡಿದ್ದು, ಕಾಲೇಜಿನ ಅನನ್ಯ ಸಮಗ್ರವಾಗಿ ಮೊದಲ ರ‍್ಯಾಂಕ್ ಜೊತೆಗೆ ಒಟ್ಟು ಮೂರು ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವಿಷಯವಾರು ರ‍್ಯಾಂಕ್ ಪಟ್ಟಿಯಲ್ಲಿ ಮಂಗಳಾ ಎಸ್. ಮೆನನ್ ಮೆಟಿರಿಯ ಮೆಡಿಕಾ 1ನೇ ರ‍್ಯಾಂಕ್ ಸಹಿತ ಮೂರು ರ‍್ಯಾಂಕ್, ಅನನ್ಯ ಸರ್ಜರಿ ವಿಷಯದಲ್ಲಿ 1ನೇ ರ‍್ಯಾಂಕ್ ಸಹಿತ ಪ್ರತ್ಯೇಕ ವಿಷಯಗಳಲ್ಲಿ ಒಟ್ಟು 8 ರ‍್ಯಾಂಕ್, ಸೋಮ ಸುರೇಶನ್ ಮೆಟಿರಿಯಲ್ ಮೆಡಿಕದಲ್ಲಿ 3ನೇ ರ‍್ಯಾಂಕ್ ಸಹಿತ ಮೂರು ರ‍್ಯಾಂಕ್, ರೆಂಜುಳಾ ಟಿ 4ನೇ ರ‍್ಯಾಂಕ್, ವರ್ಣಾ ಮ್ಯಾಥ್ಯು 4ನೇ ರ‍್ಯಾಂಕ್ ಗಳಿಸಿದ್ದಾರೆ.

ಇರ್ಫಾನ್ ಪಿ.ಕೆ, ನಿಶ್ಕಲಾ ಪಿ.ಎಸ್, ಶ್ರೀ ಪ್ರಿಯಾ, ದೀಪ್ತಿ ಬಿ.ಎಸ್, ಐಶ್ವರ್ಯ ಮೋಹನನ್ ತಲಾ ಎರಡು ರ‍್ಯಾಂಕ್ ಪಡೆದಿದ್ದಾರೆ. ಅನುಪಮಾ, ಬಿಂದಿಯಾ, ಅಶ್ವಿನಿ ಕೆ.ವಿ, ಮಯಾ ಗೋಕುಲನ್, ಅಭಿರಮಿ ಪಿ.ವಿ ತಲಾ ಒಂದು ರ‍್ಯಾಂಕ್ ಪಡೆದಿದ್ದಾರೆ.

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಒಟ್ಟು ಮೂರು ರ‍್ಯಾಂಕ್ ಲಭಿಸಿದೆ. ಅರ್ಚನಾ ಕೆ,ವಿ 3ನೇ ರ‍್ಯಾಂಕ್, ಹನಿಶ್ರೀ 5ನೇ ಹಾಗೂ ಡಾ. ದೀಕ್ಷಾ ಶೆಣೈ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ರಾಕೇಶ್ ಶ್ರೇಷ್ಠ ಎಂಪಿಟಿಯಲ್ಲಿ 5ನೇ ರ‍್ಯಾಂಕ್, ಆಳ್ವಾಸ್ ನರ್ಸಿಂಗ್ ಕಾಲೇಜಿನ ಜ್ಯೋತಿ ನಾಯಕ್ ಪಿಬಿಬಿಎಸ್‌ಸಿಯಲ್ಲಿ 1ನೇ ರ‍್ಯಾಂಕ್ ಪಡೆದಿದ್ದಾರೆ. ಹೋಸ್ಪಿಟಲ್ ಎಡ್ಮಿನಿಸ್ಟ್ರೇಶನ್ ಕಾಲೇಜಿನ ಶಿವಪ್ಪ ಜೈನಪುರ 2ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ವಿನಯಚಂದ್ರ, ನ್ಯಾಚುರೋಪತಿಯ ಪ್ರಾಂಶುಪಾಲೆ ಡಾ.ವನಿತಾ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಯತಿಕುಮಾರಸ್ವಾಮಿ ಗೌಡ, ಫಿಜಿಯೋ ತೆರಫಿಯ ಪ್ರಾಂಶುಪಾಲ ಡಾ.ಜೋಸೆಫ್ ಆಲಿವರ್, ಹೋಮಿಯೋಪತಿಯ ಪ್ರಾಂಶುಪಾಲ ಡಾ. ಪ್ರವೀಣ್ ರಾಜ್ ಆಳ್ವ, ಆಳ್ವಾಸ್ ಹಾಸ್ಪಿಟಲ್ ಎಡ್ಮಿನಿಸ್ಟ್ರೇಶನ್ ಕಾಲೇಜ್‌ನ ಪ್ರಾಂಶುಪಾಲ ಡಾ.ಆದರ್ಶ್ ಹೆಗಡೆ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English