ಮಂಗಳೂರು: ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ‘ಆಧಾರ್’ ಗುರುತು ಚೀಟಿ ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ವಿಶಿಷ್ಟ ಗುರುತು ಚೀಟಿ ‘ಆಧಾರ್’ ಪಡೆಯುವುದು ಆವಶ್ಯವಾಗಿದೆ, ಆಧಾರ್ ಕುರಿತು ಮಾಧ್ಯಗಳು ಸಾರ್ವಜನಿಕರಲ್ಲಿ ಇನ್ನಷ್ಟು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ್ರು.
ದಿನ ನಿತ್ಯದ ಸಮಸ್ಯೆಗಳಾದ ಗ್ಯಾಸ್ ವಿತರಣೆ ಸಮಸ್ಯೆ, ಇತರ ಅಕ್ರಮ ಗುರುತು ಕಾರ್ಡುಗಳ ಬಳಕೆ ತಡೆಯುವ ಉದ್ದೇಶದಿಂದ ಈ ಗುರುತು ಕಾರ್ಡು ಅಗತ್ಯ. ದಾಖಲೆಗಳನ್ನು ಸರಿಯಾಗಿ ನೋಂದಾಯಿಸಿದವರಿಗೆ ಈ ಕಾರ್ಡುನಿಂದ್ ಹೆಚ್ಚಿನ ಸುರಕ್ಷತೆಯನ್ನು ಕೂಡ ಪಡೆಯಬಹುದು ಎಂದರು.
ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿ ಬಿ. ವಾಸುದೇವ ಶೆಟ್ಟಿ, ಆಧಾರ್ ನೋಂದಣಿ ಸಂಸ್ಥೆಯ ಜಿಲ್ಲಾ ಸಮನ್ವಯ ಅಧಿಕಾರಿ ಮಹಾದೇವ ಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಪ್ರಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು.
Click this button or press Ctrl+G to toggle between Kannada and English