ಸುರಕ್ಷಾ ಯಾತ್ರೆ ಬಳಿಕ ಟಿಕೆಟ್‌ ಆಕಾಂಕ್ಷಿಗಳ ಮನವೊಲಿಕೆ

5:14 PM, Saturday, March 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

bjp-rallyಮಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಪಕ್ಷದ ಬಹಳಷ್ಟು ಟಿಕೆಟ್‌ ಆಕಾಂಕ್ಷಿಗಳಿರುವ ಕಾರಣ “ಸುರಕ್ಷಾ ಯಾತ್ರೆ’ ಮುಗಿದ ಕೂಡಲೇ ಎಲ್ಲ ಆಕಾಂಕ್ಷಿಗಳನ್ನು ಕರೆದು ಮನವೊಲಿಸುವ ಕಾರ್ಯ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿರುವ ಕಾರಣ ಪಕ್ಷದೊಳಗೆ ಈಗ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಿರುವುದು ಸಹಜ. ಇದನ್ನು ನಾವು ಸ್ವಾಗತಿಸುತ್ತೇವೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರನ್ನಷ್ಟೇ ಅಧಿಕೃತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಸಾಧ್ಯ. ಹೀಗಿರುವಾಗ ಇನ್ನುಳಿದವರಿಗೆ ಬೇಸರ ಅಥವಾ ಅಸಮಾಧಾನ ಆಗುವುದು ಸಹಜ.

ಈ ಕಾರಣಕ್ಕೆ ಮುಂದೆೆ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಉತ್ತಮ ಅವಕಾಶಗಳನ್ನು ನೀಡುವ ಮೂಲಕ ನ್ಯಾಯ ಒದಗಿಸಲಾಗುವುದು. ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಸುರಕ್ಷಾ ಯಾತ್ರೆ ಮುಗಿದ ಕೂಡಲೇ ಎಲ್ಲ ಕ್ಷೇತ್ರಗಳಲ್ಲಿರುವ ಆಕಾಂಕ್ಷಿಗಳನ್ನು ಕರೆದು ಆ ಬಗ್ಗೆ ಮಾತನಾಡಿಸುವ ಮೂಲಕ ಯಾವುದೇ ಭಿನ್ನಮತ ಸ್ಫೋಟಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಲಾಗುವುದು’ ಎಂದು ತಿಳಿಸಿದ್ದಾರೆ.

ನಾನು ಈಗಾಗಲೇ ರಾಜ್ಯದ ಎಲ್ಲ 224 ಕ್ಷೇತ್ರ ಗಳಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಪ್ರತಿ ಯೊಂದು ಕ್ಷೇತ್ರದ ವಾಸ್ತವಾಂಶ ಹಾಗೂ ಅಲ್ಲಿರುವ ಚುನಾವಣಾ ವಾತಾವರಣದ ಬಗ್ಗೆ ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಪಕ್ಷದ ಹಿರಿಯ- ಕಿರಿಯ ಮುಖಂಡರಿಂದ ಆಯಾ ಕ್ಷೇತ್ರಗಳಲ್ಲಿ ಹುಟ್ಟಿಕೊಂಡಿರುವ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದ್ದೇನೆ. ಇದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೂ ಈಗಾಗಲೇ ಕಳುಹಿಸಿ ಕೊಡಲಾಗಿದೆ.

ಅಮಿತ್‌ ಶಾ ಕೂಡ ಆಯಾ ಕ್ಷೇತ್ರಗಳಲ್ಲಿ ಎರಡು ಸುತ್ತಿನ ಸಮೀಕ್ಷೆಗಳನ್ನು ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಇವೆಲ್ಲವನ್ನೂ ಕ್ರೋಡೀಕರಿಸಿ ಆದಷ್ಟು ಬೇಗ ಯಾವುದೇ ಗೊಂದಲಗಳಿಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ನುಡಿದರು.

ಈಗಾಗಲೇ ನಾನು ರಾಜ್ಯದಲ್ಲಿ ಮೂರು ಸುತ್ತಿನ ಪ್ರವಾಸ ಮಾಡಿದ್ದೇನೆ. ಜಾಥಾಗಳು, ಪಾದಯಾತ್ರೆ ಗಳು, ರೈತ ಸಮಾವೇಶ, ಮಹಿಳಾ ಸಮಾವೇಶ, ಯುವ ಸಮಾವೇಶ, ವೃತ್ತಿಪರ ಸಮಾ ವೇಶ ಗಳನ್ನು ಆಯೋಜಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ವತಿ ಯಿಂದ ಭರದ ಸಿದ್ಧತೆಗಳು ನಡೆದಿವೆ. ಕಳೆದ ಆರು ತಿಂಗಳಿನಿಂದ ಪ್ರತಿ ಬೂತ್‌ನಲ್ಲೂ ಕಾರ್ಯ ಕರ್ತರು ಪಕ್ಷ ಸಂಘಟನೆ ಕಾರ್ಯದಲ್ಲಿ ನಿರಂತರ ವಾಗಿ ತೊಡ ಗಿಸಿ ಕೊಂಡಿದ್ದಾರೆ.

ಪ್ರತೀ ಬೂತ್‌ನಲ್ಲೂ ಮಹಿಳೆ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದ ಪ್ರತಿನಿಧಿಗಳನ್ನು ಒಳಗೊಂಡು ಒಂಬತ್ತು ಮಂದಿಯ ತಂಡ ಪಕ್ಷ ಸಂಘಟನೆಯ ಉಸ್ತು ವಾರಿ ವಹಿಸಿ ಕಾರ್ಯೋನ್ಮುಖವಾಗಿದೆ. ಈ ಎಲ್ಲ ಪ್ರತಿನಿಧಿಗಳನ್ನು ಒಳಗೊಂಡು ನವಶಕ್ತಿ ಸಮಾ ವೇಶ ಗಳನ್ನು ಈಗಾಗಲೇ ನಡೆಸಲಾಗಿದೆ. ಅಲ್ಲಲ್ಲಿ ಬಿಜೆಪಿಗೆ ಇತರ ಪಕ್ಷಗಳಿಂದ ಸೇರ್ಪಡೆ ಗೊಳ್ಳು ತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ ಕಾರದ ದುರಾಡಳಿತಕ್ಕೆ ಜನ ರೋಸಿ ಹೋಗಿ ದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ಮಟ್ಟ ದಲ್ಲಿ ಇದೆ ಎಂಬುದಕ್ಕೆ ಬೆಂಗಳೂರು ಮಹಾ ನಗರ ಪಾಲಿಕೆ ಯಲ್ಲಿನ ಅವ್ಯವಹಾರಗಳ ಒಂದು ಉದಾಹರಣೆ ಸಾಕು. ಗೂಂಡಾಗಿರಿ, ಕೊಲೆ, ಅತ್ಯಾ ಚಾರ ಪ್ರಕರಣ ಗಳು ಅವ್ಯಾಹತವಾಗಿ ನಡೆಯು ತ್ತಿವೆ. ಇದರಿಂದ ಬೇಸತ್ತಿರುವ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿ ಕಾರಕ್ಕೆ ತರಬೇಕು ಎಂದು ಬಯಸಿದ್ದಾರೆ ಎಂದರು.

ಮಾ. 3ರಿಂದ ಕುಶಾಲನಗರ ಹಾಗೂ ಅಂಕೋಲಾ ದಿಂದ ಏಕಕಾಲದಲ್ಲಿ ಸುರಕ್ಷಾ ಯಾತ್ರೆ ಪ್ರಾರಂಭ ವಾಗ ಲಿದೆ. ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕಾರ್ಯಕರ್ತರು ಭಾಗ ವಹಿಸ ಲಿದ್ದಾರೆ. ಅಲ್ಲಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿರುವುದು. ಮಂಗಳೂರಿನಲ್ಲಿ ಮಾ. 6ರಂದು ನಡೆಯುವ ಸಮಾರೋಪದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗ ವಹಿಸುತ್ತಾರೆ.

ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಳೆದ ಮೂರೂವರೆ ವರ್ಷಗಳ ಸಾಧನೆ, ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ, ಸಾಧನೆಗಳು, ಪ್ರಸ್ತುತ ಅಧಿಕಾರ ದಲ್ಲಿರುವ ಕಾಂಗ್ರೆಸ್‌ ಸರಕಾರದ 5 ವರ್ಷಗಳ ಅವಧಿಯಲ್ಲಿನ ದುರಾಡಳಿತವನ್ನು ಜನತೆಗೆ ವಿವರಿಸಲಾಗುವುದು ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ಜಗತ್ತೇ ಗೌರವದಿಂದ ಕಾಣುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತುಗಳನ್ನು ಆಡುತ್ತಿದ್ದಾರೆ. ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿ ದರೆ ತಾನು ದೊಡ್ಡ ವ್ಯಕ್ತಿಯಾಗುತ್ತೇನೆ ಎಂದು ಅವರು ಭಾವಿಸಿದಂತಿದೆ. ಈ ರೀತಿ ಲಘುವಾದ ಮಾತುಗಳಿಂದ ಸಿದ್ದರಾಮಯ್ಯನವರೇ ದೇಶದ ಮುಂದೆ ಹಗುರವಾಗುತ್ತಿದ್ದಾರೆ. ಸಿದ್ದರಾಮಯ್ಯನವ‌ರ ಧೋರಣೆ ತಿಳಿಗೇಡಿತನದ್ದು ಹಾಗೂ ಬಾಲಿಶವಾದುದು ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಮಾತುಕತೆಯ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English