ಮಂಗಳೂರು: ಮಹಿಳೆಯರು ಸೇವೆಯ ಮೂಲಕ ತಮ್ಮ ಅಸ್ಮಿತೆಯನ್ನು ಎತ್ತಿ ತೋರಿಸಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.
ಭಾನುವಾರ ನಗರದ ಕ್ಯಾಥೋಲಿಕ್ ಸಭಾ ಆಯೋಜಿಸಿದ್ದ ಕೆನರಾ ಕ್ಯಾಥೋಲಿಕ್ ಸ್ತ್ರೀಯರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರನ್ನು ಅಭಿನಂದಿಸಿದ ಬಿಷಪ್, ’ಮಹಿಳೆಯರ ಸೇವೆ ಇತರರಿಗೆ ಮಾದರಿಯಾಗಲಿ’ ಎಂದು ಹಾರೈಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ಸಮಾವೇಶ. ರಾಷ್ಟ್ರವನ್ನು ಮುನ್ನಡೆಸುವಲ್ಲಿ ಕ್ರೈಸ್ತ ಸಮಾಜದ ಕೊಡುಗೆ ಗಣನೀಯವಾದುದು. ಸೇವಾ ಮನೋಭಾವದ ಜೊತೆಗೆ ಕ್ರೈಸ್ತ ಸಮುದಾಯದ ಒಗ್ಗಟ್ಟು ಕೂಡ ಹೆಚ್ಚಾಗಬೇಕು ಎಂದರು.
Click this button or press Ctrl+G to toggle between Kannada and English