ದಕ್ಷಿಣ ಕನ್ನಡದಲ್ಲಿ ಈ ಬಾರಿ 22,513 ಹೊಸ ಮತದಾರರು

4:52 PM, Monday, March 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

electionಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ದಪಡಿಸಿದ್ದು ಜಿಲ್ಲೆಯಲ್ಲಿ ಒಟ್ಟು 16,66,814 ಮತದಾರರಿದ್ದಾರೆ. ಇವರಲ್ಲಿ 8,20,764 ಪುರುಷ ಹಾಗೂ 8,46,050 ಮಂದಿ ಮಹಿಳಾ ಮತದಾರರಾಗಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 22,513 ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಇದರಲ್ಲಿ 10,461 ಪುರುಷ ಮತ್ತು 12,053 ಮಹಿಳಾ ಮತದಾರರಾಗಿದ್ದಾರೆ.

ನೋಂದಣಿಯಾದ ಮತದಾರರ ಸಂಖ್ಯೆ ಮತ್ತು 2018 ರ ಅಂದಾಜು ಜನಸಂಖ್ಯೆಯ ವಿಶ್ಲೇಷಣೆ ನಡೆಸಿದರೆ ಕ್ರಮವಾಗಿ ಜಿಲ್ಲೆಯಲ್ಲಿ ಶೇ. 73.02 ಪುರುಷರು ಮತ್ತು ಶೇ. 73.77 ಮಹಿಳೆಯರು ಸೇರಿ ಒಟ್ಟು ಶೇ. 73.40 ಜನರು ಮತದಾನದ ಹಕ್ಕು ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9,289 ವಿಶೇಷ ಚೇತನ ಮತದಾರರಿದ್ದು ಮುಂಬರುವ ಚುನಾವಣೆಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಕಳೆದ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 1766 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ ಹೆಚ್ಚುವರಿ ಮತದಾರರು ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ 24 ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಿ 1790 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಈಗಾಗಲೇ ದಕ್ಷಿಣ ಕನ್ನಡಕ್ಕೆ 2,330 ವಿವಿಪ್ಯಾಟ್, 2,690 ಬ್ಯಾಲೆಟ್ ಯುನಿಟ್, 2,290 ಕಂಟ್ರೋಲ್ ಯುನಿಟ್ ಗಳು ಬಂದಿದ್ದು ಅವುಗಳ ಮೊದಲ ಹಂತದ ಪರಿಶೀಲನೆ ನಡೆಸಲಾಗುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English