ಉಡುಪಿ: ಮಹಿಳೆಯರ ನೋವುಗಳಿಗೆ ಸ್ಪಂದಿಸಿ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ವನ್ ಸ್ಟಾಪ್ ಸೆಂಟರ್ ‘ಸಖಿ’ಯನ್ನು ಆರಂಭಿಸುವ ಯೋಜನೆಯನ್ನು ಕೇಂದ್ರ ಸರಕಾರ ಪ್ರಾರಂಭಿಸಿದ್ದು, ಈವರೆಗೆ ದೇಶದಲ್ಲಿ ಒಟ್ಟು 171 ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಕರ್ನಾಟಕದಲ್ಲಿ ಪ್ರಥಮ ಕೇಂದ್ರ ಉಡುಪಿಯಲ್ಲಿ ಉದ್ಘಾಟನೆಗೊಂಡಿದ್ದು, ಇಲ್ಲಿ ಮಹಿಳೆಯ ಸುರಕ್ಷತೆಗೆ ಅಗತ್ಯ ವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ನಗರದ ನಿಟ್ಟೂರಿನಲ್ಲಿ 37.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ರಾಜ್ಯದ ಮೊದಲ ‘ಸಖಿ’ ವನ್ ಸ್ಟಾಪ್ ಸೆಂಟರ್‌ನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು. ಕರ್ನಾಟಕದ ದಾವಣಗೆರೆ, ಧಾರವಾಡ, ಚಿತ್ರದುರ್ಗ, ಚಾಮರಾಜನಗರ, ತುಮಕೂರು, ಮೈಸೂರು, ಬಾಗಲಕೋಟೆ ಮತ್ತು ಉಡುಪಿಯಲ್ಲಿ ಈ ಕೇಂದ್ರ ತೆರೆಯಲು ಅನುಮತಿ ನೀಡಿದ್ದು, ಉಡುಪಿಯಲ್ಲಿ ಪ್ರಥಮ ಕೇಂದ್ರ ಉದ್ಘಾಟನೆಗೊಂಡಿದೆ ಎಂದವರು ನುಡಿದರು.
ಈ ಕೇಂದ್ರದಲ್ಲಿ ಶೋಷಣೆ, ದೌರ್ಜನ್ಯ, ಅತ್ಯಾಚಾರಕ್ಕೊಳಗಾದ ಮಹಿಳೆ ಯರಿಗೆ ಎಲ್ಲಾ ರೀತಿಯಲ್ಲೂ ರಕ್ಷಣೆ ನೀಡಲಾಗುತ್ತದೆ. ಕನಿಷ್ಠ ಎಂಟು ಹಾಸಿಗೆ ಯುಳ್ಳ ಈ ಕೇಂದ್ರದಲ್ಲಿ ನರ್ಸ್, ವೈದ್ಯರು, ವಕೀಲರು, ಪೊಲೀಸ್ ಹಾಗೂ ಕೌನ್ಸಿಲರ್‌ಗಳ ಸೇವೆ ಉಚಿತವಾಗಿ ಲಭ್ಯವಿರುತ್ತದೆ. ಇದು ನೊಂದ ಮಹಿಳೆ ಯರಿಗೆ ನೆರವಾಗುವ ಸಾಂತ್ವನ ಕೇಂದ್ರವಾಗಿರುತ್ತದೆ ಎಂದರು.
ಮಹಿಳೆಯರ ಮೇಲೆ ಯಾವುದೇ ವಿಧದ ದೌರ್ಜನ್ಯಗಳಾದರೆ ನಮ್ಮ ಸಮಾಜ ಮಹಿಳೆಯನ್ನೇ ದೋಷಿಯನ್ನಾಗಿ ಮಾಡುತ್ತದೆ. ಅವರಿಗೆ ರಕ್ಷಣೆ ನೀಡಬೇಕಾದ ಪೊಲೀಸರೂ ಕೆಲವೊಮ್ಮೆ ಮಹಿಳೆಯರೊಂದಿಗೆ ಅಸೌಜನ್ಯವಾಗಿ ನಡೆದುಕೊಳ್ಳುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರ ಪೊಲೀಸ್ ನೇಮಕಾತಿಯಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತಂದಿದ್ದು, 7 ರಾಜ್ಯಗಳು ಈಗಾಗಲೇ ಈ ನಿಯಮ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದರು.
ಇದರೊಂದಿಗೆ ಮದ್ಯಪ್ರದೇಶದಲ್ಲಿ ಮಹಿಳೆಯರ ‘ಶೌರ್ಯ ಪೊಲೀಸ್ ಸ್ವಯಂಸೇವಕ’ ಯೋಜನೆಯನ್ನು ಜಾರಿಗೆ ತಂದು ಯಶಸ್ವಿಯಾಗಿದೆ. 10 ಮಂದಿ ಶೌರ್ಯ ತಂಡ ಗ್ರಾಮಗಳಲ್ಲಿ ಮಹಿಳೆಯರ ನೆರವಿಗೆ ಕಾರ್ಯಾಚರಿಸುತ್ತದೆ ಎಂದರು. ವಿಧವೆಯರಿಗಾಗಿ ಉತ್ತರ ಪ್ರದೇಶದ ಬೃಂದಾವನದಲ್ಲಿ 1000 ಬೆಡ್‌ಗಳ ಆಶ್ರು ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಅಲ್ಲದೇ ವ್ಯಕ್ತಿಯ ಮರಣದ ನಂತರ ಆತನ ಮರಣ ಪ್ರಮಾಣಪತ್ರದಲ್ಲಿ ಪತ್ನಿಯ ಹೆಸರನ್ನು ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಪತಿಯ ನಿಧನದ ನಂತರ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಮಹಿಳೆಯರಿಗೆ ಮಾತೃತ್ವ ರಜೆಯನ್ನು 6 ತಿಂಗಳವರೆಗೆ ವಿಸ್ತರಿಸಲಾಗಿದ್ದು, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯನ್ನು ಅಂಗವಿಕಲರು ಎಂದು ಪರಿಗಣಿಸಿ, ಅಂಗವಿಕಲರಿಗೆ ನೀಡುವ ಎಲ್ಲಾ ಸೌಲ್ಯಗಳನ್ನು ಅವರಿಗೂ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮನೇಕಾ ಗಾಂಧಿ ಹೇಳಿದರು.
Click this button or press Ctrl+G to toggle between Kannada and English