ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ : ಯೋಗಿ

10:32 AM, Wednesday, March 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

yogi-adithyanathಮಂಗಳೂರು: ‘ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ. ಕರ್ನಾಟಕದ ಪ್ರತಿ ಯೋಜನೆಯಿಂದ ಜನರ ದುಡ್ಡನ್ನು ಕಾಂಗ್ರೆಸಿಗರು ಲೂಟಿ ಮಾಡಿದ್ದಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದರು. ಮಂಗಳೂರಿನಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್,

ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹೊಸ ಅಲೆ ಎದ್ದಿದೆ. ಈಶಾನ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ತ್ರಿಪುರಾ, ನಾಗಾಲ್ಯಾಂಡಲ್ಲಿ ಕಾಂಗ್ರೆಸ್ ಶೂನ್ಯ ಗಳಿಕೆ ಆಗಿದೆ. ಕರ್ನಾಟಕ ಕೂಡ ಕಾಂಗ್ರೆಸ್ ಮುಕ್ತ ಆಗಬೇಕು ಎಂದು ಹೇಳಿದ ಅವರು ಮೋದಿ ಸರಕಾರ ಬಂದ ಬಳಿಕ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಅಭಿವೃದ್ಧಿಯ ಅಜೆಂಡಾಕ್ಕೆ ಜನ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಕಾಂಗ್ರೆಸ್ ಸರಕಾರದ್ದು ಅಮಾಯಕರ ಹತ್ಯೆಯೇ ಅಜೆಂಡಾ ಅಗಿದೆ. ಇಲ್ಲಿ ಹಿಂದೂ ಕಾರ್ಯಕರ್ತರೇ ಸುರಕ್ಷಿತರಿಲ್ಲ ಮತ್ತೆ ಜನಸಾಮಾನ್ಯರ ಪಾಡೇನು ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಯಾಕೆ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು ರೈತರ ಆತ್ಮಹತ್ಯೆ ರಾಜ್ಯದ ಗಂಭೀರ ಅನಿಸುತ್ತಿಲ್ಲವೇ? ಎಂದು ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ 86 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇನೆ. 1 ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡಿದ್ದೇನೆ ಇದು ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದರು. ಕರ್ನಾಟಕ ದಲ್ಲಿರುವುದು ರೈತವಿರೋಧಿ, ಹಿಂದೂ ವಿರೋಧಿ ಸರಕಾರ ಎಂದು ಅವರು ಕಿಡಿಕಾರಿದರು.

ಉತ್ತರ, ಪೂರ್ವೋತ್ತರ ಭಾರತ ಹೇಗೆ ಕಾಂಗ್ರೆಸ್ ಮುಕ್ತ ಆಗಿದ್ಯೋ ಹಾಗೇ ಕರ್ನಾಟಕವೂ ಆಗಬೇಕು ಎಂದು ಹೇಳಿದ ಅವರು ಕಾಂಗ್ರೆಸ್ ಪಾಲಿನ ಏಕೈಕ ಎಟಿಎಂ ಅನ್ನು ಬಂದ್ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಕರೆನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ ತುಷ್ಠೀಕರಣ ನೀತಿ ಅನುಸರಿಸುತ್ತಿದ್ದಾರೆ. 15 ಪರ್ಸೆಂಟ್ ಇರುವ ಅಲ್ಪಸಂಖ್ಯಾತರ ಓಟಿಗಾಗಿ ಜೊಲ್ಲು ಸುರಿಸ್ತೀರಲ್ಲಾ.ಹಾಗಾದ್ರೆ ಬಹುಸಂಖ್ಯಾತ ಹಿಂದುಗಳು ಬೇವರ್ಸಿಗಳಾ? ಹಿಂದುಗಳ ಓಟಿಗೆ ಬೆಲೆ ಇಲ್ಲವೇ ? ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯ ದಲ್ಲಿ 7748ಕ್ಕೂ ಹೆಚ್ಚು ಕೊಲೆ ನಡೆದಿದೆ. 9400 ಡಕಾಯಿತಿ, 7538 ರೇಪ್, 11900 ಕಿಡ್ನಾಪ್, 35 ಸಾವಿರ ಚೀಟಿಂಗ್ ಕೇಸ್, 11 ಲಕ್ಷ ಕ್ರಿಮಿನಲ್ ಕೇಸ್ ದಾಖಲಾಗಿದೆ. ಕರ್ನಾಟಕ ಪಾಪಿಗಳ ಲೋಕದ ಸ್ವರ್ಗ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನದ್ದು ಪಾತಕ ಸರ್ಕಾರ, ಪಾಪಿ ಮುಖ್ಯಮಂತ್ರಿ. ಹುಟ್ಟಿದ ರಕ್ತದ ನೆನಪಿಲ್ಲ, ಈ ನತಗೇಡಿಗೆ ಎಂದು ಟೀಕಿಸಿದ ಅವರು ನಾವು ಬೆಂಗಳೂರು ಬರೋ ಮುಂಚೆ, ಕುರ್ಚಿ ಬಿಟ್ಟು ತೊಲಗಿ ಇಲ್ಲಾ ಅಂದ್ರೆ ಕರಾವಳಿಯಲ್ಲಿ ಸುನಾಮಿ ಎದ್ದಿದೆ, ಅದು ಬೆಂಗಳೂರು ಮುಟ್ಟಲಿದೆ ಎಂದು ಹೇಳಿದರು.

ಈ ಬಹಿರಂಗ ಸಬೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಕೆಎಫ್ ಡಿ, ಪಿಎಫ್ ಐ 175 ಪ್ರಕರಣ ಹಿಂಪಡೆದ ಬಳಿಕ‌ ಸಾಕಷ್ಟು ಕೊಲೆ ನಡೆದಿದೆ. ಕಳೆದ ಎರಡೂ ವರ್ಷಗಳಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆ ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ನರ ಹಂತಕ ಎಂದು ಕರೆದಿದ್ದರು. ಮೋದಿ ಮೇಲಿದ್ದ ಆರೋಪ ಸುಳ್ಳು ಸಾಬೀತಾಗಿ ಕ್ಲೀನ್ ಚಿಟ್ ದೊರಕಿದೆ.

ಆದರೆ 23 ಕೊಲೆ ಮಾಡಿಸಿ ನಗು ಮುಖದಿಂದಲೇ ಮದುವೆ, ಮುಂಜಿ ಮಾಡಿಸುವ ಸಿದ್ಧರಾಮಯ್ಯನವರಿಗಿಂದ ದೊಡ್ಡ ನರಹಂತಕ ಬೇಕಾ? ಎಂದು ಅವರು ಕಿಡಿಕಾರಿದರು. ಬೆಂಗಳೂರಿನ ಶಿವಾಜಿನಗರದಲ್ಲಿ ಈಗ ಅಫ್ಜಲ್ ಖಾನ್ ಸಂತತಿ ಯವರು ತುಂಬಿದ್ದಾರೆ. ಈಗ ಎಚ್ಚರವಾಗಿಲ್ಲದಿದ್ದರೆ ಕಾಶ್ಮೀರದಲ್ಲಿ ಹಿಂದೂ ಪಂಡಿತರಿಗಾದ ಪರಿಸ್ಥಿತಿಯೇ ಕರಾವಳಿಗಾಗಬಹುದು ಎಂದು ಅವರು ಆತಂಕ ವ್ಯಕ್ತ ಪಡಿಸಿದರು.
ಸಿದ್ಧರಾಮಯ್ಯನವರು ಯೋಗಿ ಬಗ್ಗೆ ಮಾತನಾಡುತ್ತಾರೆ.

ಆದರೆ, ಯೋಗಿ ಆದಿತ್ಯ ನಾಥ್ ಅವರ ಬಗ್ಗೆ ಮಾತನಾಡಲೂ ಯೋಗ್ಯತೆ ಬೇಕು. ಈಗ ಉತ್ತರಪ್ರದೇಶದಲ್ಲಿ ಕ್ರಿಮಿನಲ್ ಗಳು ಹೊರಬರಲು ಹೆದರುತ್ತಾರೆ. ಆದರೆ, ರಾಜ್ಯದಲ್ಲಿ ಕ್ರಿಮಿನಲ್ ಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುವ ಪರಿಸ್ಥತಿ ನಿರ್ಮಾಣ ವಾಗಿದೆ ಎಂದು ಅವರು ಅಕ್ರೋಶ ವ್ಯಕ್ತ ಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English