ಮಂಗಳೂರು: ಸುರಕ್ಷಾ ಯಾತ್ರೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಮಂಗಳೂರಿನಲ್ಲಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಜನ ದಡ್ಡರೆಂದು ತಿಳಿದಿದ್ದಾರೆ. ಆದ್ರೆ ಈ ರಾಜ್ಯದ ಸಾಮರಸ್ಯ ಶಕ್ತಿಯೇ ಜನರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಅನ್ನುತ್ತಾರೆ. ನಾವು ಈ ರಾಜ್ಯದಲ್ಲಿ ಹಸಿವು ಮುಕ್ತ, ಋಣಮುಕ್ತ ಕಾರ್ಯಕ್ರಮ ಮಾಡಿದ್ದೇವೆ ಎಂದು ಸಚಿವರು ಹೇಳಿದರು.
ಜಿಲ್ಲೆಯ ಯಾರಿಂದ ಸಾಮರಸ್ಯಕ್ಕೆ ತೊಡಕು ಎಂಬುದಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಜನಸುರಕ್ಷಾ ಯಾತ್ರೆ ಮಾಡಲು ಯಾವ ನೈತಿಕತೆ ಇದೆ. ಮಾನ-ಮರ್ಯಾದೆ ಇದೆಯಾ ಅವರಿಗೆ. ಹಿಂದೂಗಳನ್ನೇ ಅವರು ಕೊಲೆ ಮಾಡಿದ್ದಾರೆ. ವಿನಾಯಕ ಬಾಳಿಗ, ಹರೀಶ್ ಪೂಜಾರಿ, ಪ್ರಶಾಂತ್ ಪೂಜಾರಿ ಕೊಲೆಯ ಹಿಂದೆ ಇರುವವರು ಯಾರು, ಅವರಿಗೆ ವಕಾಲತ್ತು ಮಾಡುವವರು ಯಾರು ಎಂದು ಪ್ರಶ್ನಿಸಿದರು.
ಸಿಎಂ ಅವರನ್ನ ನರಹಂತಕ ಎಂದು ಹೇಳುವ ನಳಿನ್ ಕುಮಾರ್ ಕಟೀಲ್‌ಗೆ ಮಾನ-ಮರ್ಯಾದೆ ಇಲ್ಲ. ಯಾವುದೇ ಕೆಲಸ ಮಾಡದೆ ಪ್ರಚೋದನಕಾರಿಯಾಗಿ ಮಾತನಾಡುವವರಿಗೆ ನಮ್ಮ ಬಗ್ಗೆ ಮಾತಾಡಲು ನೈತಿಕತೆ ಇಲ್ಲ. ನಾವು ನಿಜವಾದ ದೇವರ ಭಕ್ತರು. ನಾವು ನಿಜವಾದ ರಾಮ ಭಕ್ತರು. ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಇಲ್ಲ. ಬಿಜೆಪಿಯವರು ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆ ಆಗಬೇಕೆಂದು ಬಯಸುತ್ತಾರೆ ಎಂದು ದೂರಿದರು.
Click this button or press Ctrl+G to toggle between Kannada and English