ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ನವರಾತ್ರಿ ಉತ್ಸವಕ್ಕೆ ಹುಲಿವೇಷ ಮತ್ತು ಇತರ ವೇಷಗಳನ್ನು ಧರಿಸುವವರು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆದುಕೊಳ್ಳುವುದು ಅಗತ್ಯ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ನವರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸುವ ಟ್ಯಾಬ್ಲೋ ವಾಹನಗಳು ಅನುಮತಿಯನ್ನು ಪಡೆದುಕೊಳ್ಳಬೇಕು. ಯಾವುದೇ ವಾಹನದಲ್ಲಿ, ಟ್ಯಾಬ್ಲೋಗಳಲ್ಲಿ ಡಿಜೆ ಬಳಸಬಾರದು. ಟ್ಯಾಬ್ಲೊ ಮತ್ತು ಇತರ ಕಡೆಗಳಲ್ಲಿ ಧರಿಸುವ ವೇಷಗಳು ಯಾವುದೇ ಧರ್ಮ ಅಥವಾ ಜಾತಿಯವರಿಗೆ ಅವಹೇಳನವಾಗುವ ಹಾಗೂ ಅಸಭ್ಯತೆ ತೋರುವ ರೀತಿಯಲ್ಲಿ ಇರಬಾರದು. ಈ ಸೂಚನೆಗಳನ್ನು ಉಲ್ಲಂಘಿಸುವವ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Click this button or press Ctrl+G to toggle between Kannada and English