ಬಿ.ಸಿ ರೋಡ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

6:22 PM, Thursday, March 8th, 2018
Share
1 Star2 Stars3 Stars4 Stars5 Stars
(No Ratings Yet)
Loading...

womens-dayಮಂಗಳೂರು: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ರಿ) (ಸಿ.ಒ.ಡಿ.ಪಿ) ಮಂಗಳೂರು, ದ.ಕ ಸಹಜೀವನ ಜಿಲ್ಲಾ ಒಕ್ಕೂಟ ಮತ್ತು ನಮನ ಮಹಿಳಾ ಒಕ್ಕೂಟ, ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ದಿನಾಂಕ8-03-2018 ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಬಿ.ಸಿ.ರೋಡ್‌ನಲ್ಲಿನಡೆಯಿತು. ಈ ಸಂದರ್ಭದಲ್ಲಿ ಬಿ.ಸಿ ರೋಡ್ ಜಂಕ್ಷನ್‌ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಜಾಥಾವನ್ನು ಬೆಳಿಗ್ಗೆ 10.00ಕ್ಕೆ ಸರಿಯಾಗಿ ಬಂಟ್ವಾಳ ಪುರಸಭೆಯ ಕೌನ್ಸಿಲರ್ ಶ್ರೀಮತಿ ಯಾಸ್ಮಿನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಶುಭಕೋರಿ, ಮಹಿಳೆಯರ ಪಾತ್ರವನ್ನು ವಿವರಿಸುತ್ತಾ, ಪುರುಷರು ಮಹಿಳೆಯರನ್ನು ಗೌರವಿಸಬೇಕು ಹಾಗೂ ಅವಳ ತ್ಯಾಗ, ಪ್ರೀತಿ, ನಿಸ್ವಾರ್ಥ ಮನೋಭಾವನೆಗೆ ಸ್ಪಂದಿಸಬೇಕು ಹಾಗು ಇದರಿಂದ ಉತ್ತಮ ಸಮಾಜ ಕಟ್ಟುವಲ್ಲಿ ನಾವೆಲ್ಲರೂ ಒಗ್ಗೂಡಬೇಕು ಎಂದು ಕರೆನೀಡಿದರು. ಬಳಿಕ ವಿವಿಧ ಒಕ್ಕೂಟಗಳು, ಸ್ವ ಸಹಾಯ ಸಂಘದ ಸದಸ್ಯರಿಂದ ಬೃಹತ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಜಾಥವು ಸ್ಪರ್ಶ ಕಲಾಮಂದಿರದ ಮೈದಾನಕ್ಕೆ ಸಾಗಿ ಬಂತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರು ಜಾಥವನ್ನು ಯಶ್ವಸಿಗೊಳಿಸಿದರು.

womens-day-2ಬಳಿಕ ಸಭಾ ಕಾರ್ಯಕರ್ಮವು ಸ್ಪರ್ಶ ಕಲಾ ಮಂದಿರದಲ್ಲಿ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಸ್ನೇಹಾ ಮಹಿಳಾ ಒಕ್ಕೂಟದ ಸದಸ್ಯರ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡಿತು. ನೆರೆದ ಗಣ್ಯರನ್ನು ಸಿ.ಒ.ಡಿ.ಪಿಸಂಸ್ಥೆಯ ನಿರ್ದೇಶಕರಾದ ವಂದನೀಯ ಸ್ವಾಮಿ ಓಸ್ವಲ್ಡ್ ಮೊಂತೇರೊ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು.ಇವರು ತಮ್ಮ ಸ್ವಾಗತ ಭಾಷಣದಲ್ಲಿ, ಸಿ.ಒ.ಡಿ.ಪಿ ಸಂಸ್ಥೆಯ ಕಿರು ಪರಿಚಯವನ್ನು ನೀಡಿ,ಎಲ್ಲಾ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭ ನುಡಿದರುಹಾಗೂ ಗಂಡು ಹೆಣ್ಣು ಬೇಧವಿಲ್ಲದೆ, ಸಮಾನತೆಯಿಂದ ಜೀವಿಸುವುದು ಮತ್ತು ಸಮಾನ ಅವಕಾಶಗಳನ್ನು ಗುರುತಿಸಿ, ಸಮಾಜದಲ್ಲಿ ಮಹಿಳೆಯರನ್ನು ಗೌರವಿಸಿ, ಉತ್ತಮ ಸಮಾಜ ನಿರ್ಮಿಸುವಲ್ಲಿ ನೆರವಾಗಲು ಕರೆನೀಡಿದರು.

ಸಮಾವೇಶದ ಅಧ್ಯಕ್ಷರಾದ ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರು ವಂದನೀಯ ಸ್ವಾಮಿ ರಿಚಾರ್ಡ್ ಕುವೆಲ್ಲೊ ರವರು ಸಿ.ಒ.ಡಿ.ಪಿ ಹಾಗೂ ನಮ್ಮ ದೇಶದ ಧ್ವಜವನ್ನು ಸ್ವೀಕರಿಸಿ, ದೀಪವನ್ನು ಬೆಳಗಿಸಿ ಒಗ್ಗಟ್ಟನ್ನು ಪ್ರತಿಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಹಾಗೂ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬಂಟ್ವಾಳ ತಾಲೂಕಿನ ಹೈಸ್ಕೂಲ್ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನವನ್ನು ವಿತರಿಸಿದರು. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಂತಿ ಮತ್ತು ಸೌರ್ಹತೆಯು ಮುಕ್ತಿಯ ರೂಪ ಎಂದು ವಿವರಿಸಿದರು.

womens-day-3ಅಶಾಂತಿಯು ರೋಗದ ಲಕ್ಷಣ. ಅದಕ್ಕಾಗಿ ಶಾಂತಿಗಾಗಿ ಶ್ರಮಿಸೋಣ. ದೇಶದಲ್ಲಿರುವ ಶಾಂತಿ, ಸಮಾನತೆ, ಕೋಮು ಸೌಹಾರ್ದತೆಯನ್ನು ಕಾಪಾಡಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾದ ನಿವೃತ್ತ ಪ್ರೊಫೆಸರ್ ರೋಶಿನಿ ನಿಲಯ ಡಾ| ರೀಟಾ ನೊರೊನ್ಹಾರವರು ’ಆರೋಗ್ಯಕರ ಸಮಾಜ ಕಟ್ಟುವಲ್ಲಿ ಮಹಿಳೆಯ ಪಾತ್ರ’ ಇದರ ಬಗ್ಗೆ ವಿವರಿಸಿದರು. ಈ ಸಂದರ್ಭ ಮಾತನಾಡಿದ ಅವರು ಘನತೆಯ ಬದುಕನ್ನು ಬದುಕಲು ಕರೆ ನೀಡಿದರು. ಸಮಾಜದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಹೋರಾಡಬೇಕಾಗಿದೆ. ಅನ್ಯಾಯವಾದಾಗ ಪ್ರಶ್ನಿಸಲು ಶಕ್ತರಾಗಬೇಕು ಹಾಗೂ ಯಾವುದೇ ದೌರ್ಜನ್ಯಗಳು ಕಂಡು ಬಂದಲ್ಲಿ ಅದನ್ನು ಎದುರಿಸುವಂತಹ ಭಾವನೆಗಳು ನಮ್ಮಲ್ಲಿ ಇರಬೇಕುಮತ್ತು ಮಾನವೀಯತೆಯ ಬದುಕನ್ನು ಕಟ್ಟಲು ಮುಂದಾಗಬೇಕೆಂದು ಕರೆ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English