ತ್ರಿಪುರದಲ್ಲಿ 25 ವರ್ಷಗಳ ಕಮ್ಯುನಿಸ್ಟ್‌‌ ಆಡಳಿತ ಅಂತ್ಯ: ಇಂದಿನಿಂದ ಬಿಜೆಪಿ ಯುಗಾರಂಭ

10:00 AM, Friday, March 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

biplab-devಅಗರ್ತಲಾ: ತ್ರಿಪುರದಲ್ಲಿ 25 ವರ್ಷಗಳ ಕಾಲ ಇದ್ದ ಕಮ್ಯುನಿಸ್ಟ್‌‌ ಆಡಳಿತ ಅಂತ್ಯಗೊಂಡಿದ್ದು, ಇಂದಿನಿಂದ ಬಿಜೆಪಿ ಆಡಳಿತ ಆರಂಭವಾಗಲಿದೆ. ನೂತನ ಮುಖ್ಯಮಂತ್ರಿಯಾಗಿ ಬಿಪ್ಲಾಬ್‌ ದೇವ್‌ ಇಂದು ಪದಗ್ರಹಣ ಮಾಡಲಿದ್ದಾರೆ.

ತ್ರಿಪುರದಲ್ಲಿ ಸಿಪಿಐಎಂ ಪಕ್ಷ ಸತತ 25 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ದೇಶದ ಬಡ ಮುಖ್ಯಮಂತ್ರಿ ಎಂದೇ ಖ್ಯಾತರಾಗಿದ್ದ 19 ವರ್ಷಗಳ ಕಾಲ ಮಾಣಿಕ್‌ ಸರ್ಕಾರ್‌ ಆಡಳಿತ ನಡೆಸಿದ್ದರು. ಆದರೆ, ಈ ಬಾರಿ ನಡೆದ ವಿಧಾನಸಭೆ ಚುನಾವಣೆಯ 59 ಕ್ಷೇತ್ರಗಳಲ್ಲಿ ಸಿಪಿಐಎಂ ಕೇವಲ 17 ಸ್ಥಾನಗಳನ್ನು ಗೆದ್ದು ಸೋಲು ಕಂಡಿದೆ.

ಬಿಜೆಪಿ ಮತ್ತು ಮಿತ್ರಪಕ್ಷ ಐಪಿಎಫ್‌‌ಟಿ (Indigenous People’s Front of Tripura) 35 ಸ್ಥಾನಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿವೆ. ಇಂದು ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ಬೆಳಗ್ಗೆ 10:30ಕ್ಕೆ ಬಿಪ್ಲಾಬ್‌ ದೇವ್‌ ತ್ರಿಪುರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ದೇವ್‌ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಬಿಜೆಪಿ ಆಳಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಜಿಷ್ಣು ಕುಮಾರ್ ದೇವ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇನ್ನು, ಈ ಸಮಾರಂಭಕ್ಕೆ ಮಾಜಿ ಸಿಎಂ ಮಾಣಿಕ್‌ ಸರ್ಕಾರ್‌ ಅವರಿಗೆ ನಿಯೋಜಿತ ಮುಖ್ಯಮಂತ್ರಿ ಬಿಪ್ಲಾಬ್‌ ದೇವ್‌ ವೈಯಕ್ತಿಯ ಆಹ್ವಾನ ನೀಡಿದ್ದು, ಮಾಣಿಕ್‌ ಸರ್ಕಾರ್‌ ಸಹ ಭಾಗಹಿಸುವ ನಿರೀಕ್ಷೆಗಳಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English