ಬೆಂಗಳೂರು ರಕ್ಷಿಸಿ ಯಾತ್ರೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

3:18 PM, Friday, March 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

bjp-yatreಬೆಂಗಳೂರು: “ಬೆಂಗಳೂರಿನಲ್ಲಿ ಹಾಡುಹಗಲೇ ದರೋಡೆ, ಕೊಲೆ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದಕ್ಕೆಂದೇ ಬೆಂಗಳೂರು ಸುರಕ್ಷಾ ಯಾತ್ರೆ ನಡೆಸುತ್ತಿದ್ದೇವೆ” ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು. ಬೆಂಗಳೂರಿನ ಹತ್ತು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷದ ಮುಖಂಡರು ಆರಂಭಿಸಿರುವ ಬೆಂಗಳೂರು ರಕ್ಷಿಸಿ ಯಾತ್ರೆಯಲ್ಲಿ ಅವರು ಮಾತನಾಡುತ್ತಿದ್ದರು. ಯಾತ್ರೆ 7 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು(ಮಾ.09) ಸರ್ವಜ್ಞನಗರದಲ್ಲಿ ಬಿಜೆಪಿ ಮುಖಂಡರು ಪಾದಯಾತ್ರೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ, ಹೆಣ್ಣೂರು ಮೇಲೂ ಸೇತುವೆ ಕಟ್ಟೋದಕ್ಕೆ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಐದು ವರ್ಷಗಳಿಂದ ಏನೂ ಮಾಡಿಲ್ಲ. ಆದರೆ ಈಗ ಚುನಾವಣೆ ಹತ್ತಿರವಾಗುತ್ತಿದಂತೆ ಸಿಎಂ ಕರೆದುಕೊಂಡು ಬಂದು ಉದ್ಘಾಟನೆ ಮಾಡಲಾಗಿದೆ. ಈ ಕ್ಷೇತ್ರ ದ ಟ್ರಾಫಿಕ್ ಸಮಸ್ಯೆ ನಿವಾರಿಸೋಕೆ ಏನೂ ಮಾಡಿಲ್ಲ. ನೀವು ಏನುಮಾಡಿದ್ದೀರಾ ಸ್ವಾಮಿ, ಐದು ವರ್ಷಗಳಿಂದ? ಎಂದು ಸರ್ವಜ್ಞ ನಗರ ಶಾಸಕ ಜಾರ್ಜ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನಗರದಲ್ಲಿ ಸಾಮಾನ್ಯ ಜನರಿರಲಿ, ಪೊಲೀಸರ ಧರ್ಮಪತ್ನಿ ಸಹ ಮನೆಯಿಂದ ಹೊರಗೆ ಹೋಗುವುದಕ್ಕೆ ಭಯಪಡುವಂಥ ಸನ್ನಿವೇಶ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೇಳಿದರು.

ಇನ್ನು ಕೆಲವೇ ದಿನ ಸಿದ್ದರಾಮಣ್ಣ ಹುಂಡಿಗೆ ಹೋಗುತ್ತಾರೆ ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಬೆಂಗಳೂರು ರಕ್ಷಿಸಿ ಯಾತ್ರೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, “ಬೆಂಗಳೂರು ಸೇಫ್ ಸಿಟಿ ಅಂತ ಜನ ಇಲ್ಲಿಗೆ ಬಂದರು. ಆದರೆ ಬೆಮಗಳೂರು ಈಗ ಕ್ರೈಂ ಸಿಟಿಯಾಗಿದೆ. ಲೋಕಾಯುಕ್ತರಿಗೆ ರಕ್ಷಣೆ ಕೊಡದ ನೀವು ಸಾಮಾನ್ಯ ಜನರಿಗೆ ರಕ್ಷಣೆ ನೀಡುತ್ತೀರಾ? ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English