ಮಂಗಳೂರು: ರೋಟರಿ ಕ್ಲಬ್‌ನಿಂದ ಅಂತಾರಾಷ್ಟ್ರ ಮಟ್ಟದಲ್ಲಿ ಪೋಲಿಯೋವನ್ನು ಕೊನೆಗೊಳಿಸಲು ಆರಂಭವಾದ ಲಸಿಕೆ ಅಭಿಯಾನವು ಇಂದು ಎಲ್ಲಾ ರಾಷ್ಟ್ರಗಳ ಸರಕಾರಗಳು ಮುಂದುವರಿಸುತ್ತಿವೆ ಎಂಬುದು ಸಂತಸದ ಸಂಗತಿ.
ಪೋಲಿಯೋ ಲಸಿಕೆಗೆ ಈಗಲೂ ರೋಟರಿ ಪಂವ್ಡೇಶನ್ ಎಲ್ಲಾ ರಾಷ್ಟ್ರಗಳ ಸರಕಾರಗಳಿಗೆ ಅನುದಾನ ನೀಡುತ್ತಿದೆ. ಸ್ಥಳೀಯ ರೋಟರಿ ಕ್ಲಬ್‌ಗಳು ಪೋಲಿಯೋ ಹಾಕುವ ಸಿಬ್ಬಂಧಿಗಳ ಆಹಾರ ನೀಢಿ ಸಹಕರಿಸುತ್ತಿವೆ ಎಂದು ಎ ಜೆ ಆಸ್ಪತ್ರೆಯ ಹಿರಿಯ ಪ್ರಾದ್ಯಾಪಕ ರೊಟೇರಿಯನ್ ಪಿಡಿಜಿ ಡಾ ದೇವ್ದಾಸ್ ರೆಯ್ ಹೇಳಿದರು.
ಅವರು ರೋಟರಿ ಕ್ಲಬ್ ಸೆಂಟ್ರಲ್ ಇದರ ಹದಿನೆರಡು ಬೂತ್ಗಳಿಗೆ ಆಹಾರ ನೀಡುವ ಪಲ್ಸ್ ಪೋಲಿಯೋ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಂತರ ಪಲ್ಸ್ ಪೋಲಿಯೋ ಕದ್ರಿ ದೇವಸ್ಥಾನ ಬಳಿಯ ಅಂಗನವಾಡಿಯ ಬೂತ್, ಸಿಟಿ ಸರ‍್ಕಲ್ ಕೆನರಾ ಶಾಲೆ ಬಳಿಯ ಬೂತ್, ಬೆಂಗರೆಯ ಮೂರು ಬೂತ್, ಬಂದರಿನಲ್ಲಿ ಬಸ್ತಿ ಗಾರ‍್ಡನ್ , ನೀಲೆಶ್ವರಯ್ಯ ಹೀಗೆ ಹದಿನೆರಡು ಕಡೆ ಬೆಳಗ್ಗಿನ ತಿಂಡಿ ಹಾಗೂ ಮದ್ಯಾಹ್ನದ ಊಟ ನೀಡಲಾಯಿತು.
ನಿಕಟ ಪೂರ‍್ವ ಅದ್ಯಕ್ಶರಾದ ಅನಿಲ್ ಗೊನ್ಸಾಲ್ವಿಸ್, ಮಾಜಿ ಅದ್ಯಕ್ಶರಾದ ಕೆ ಎಂ ಹೆಗ್ಡೆ,ಪತ್ನಿ ಪ್ರಮೀಳಾ ಹೆಗ್ಡೆ, ನಿಯೋಜಿತ ಅದ್ಯಕ್ಶ ಸಂತೋಶ್ ಶೇಟ್,ಕಾರ‍್ಯದರ‍್ಶಿ ಜೋಯೆಲ್ ಲೋಬೊ ಬೂತ್ಗಳಿಗೆ ತೆರಳಿ ಆಹಾರ ನೀಡಲು ಸಹಕರಿಸಿದರು.
Click this button or press Ctrl+G to toggle between Kannada and English