ಕುಲಶೇಖರ ಶ್ರೀ ಧರ್ಮಶಾಸ್ರ ಮಂದಿರದಿಂದ ಮೇಯರ್ ಭಾಸ್ಕರ ಕೆ.ರವರಿಗೆ ಸನ್ಮಾನ

1:13 PM, Tuesday, March 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

mayor-baskar-moilyಮಂಗಳೂರು: ಕುಲಶೇಖರ ಜ್ಯೋತಿ ನಗರದ ಶ್ರೀ ಧರ್ಮಶಾಸ್ರ ಮಂದಿರ ಟ್ರಸ್ಟ್ ವತಿಯಿಂದ ಮಂಗಳೂರು ಮಹಾನಗರಪಾಲಿಕೆಯ ನೂತನ ಮೇಯರ್ ಶ್ರೀ ಭಾಸ್ಕರ್ ಕೆ.ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಮಂದಿರದ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ರಾಮ್‌ಪ್ರಸಾದ್‌ರವರು ಮಾತನಾಡಿ ಭಾಸ್ಕರವಣ್ಣನವರು ಕಳೆದ 10 ವರ್ಷಗಳಿಂದ ಮಂದಿರದ ಗೌರವ ಸಲಹೆಗಾರರಾಗಿ ಮಂದಿರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿರುತ್ತಾರೆ.

ಪದವು ವಾರ್ಡ್‌ನಲ್ಲಿ ಸತತ ಮೂರನೇ ಬಾರಿಗೆ ದಾಖಲೆ ಮತಗಳ ಅಂತರದಿಂದ ಕಾರ್ಪೋರೇಟರ್ ಆಗಿ ಆಯ್ಕೆಯಾಗಿ ನಿರಂತರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರಿಯರಾಗಿದ್ದು ಇದೀಗ ಮೇಯರ್ ಆಗಿರುವುದು ಅತ್ಯಂತ ಸಂತಸದ ವಿಚಾರ ಎಂದು ಹೇಳಿದರು. ನಂತರ ನೂತನ ಮೇಯರ್ ರವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮೇಯರ್‌ರವರು ಇದು ನನಗೆ ದೊರೆತ ಸನ್ಮಾನವಲ್ಲ ನನ್ನನ್ನು ಕಾರ್ಪೋರೇಟರ್ ಆಗಿ ನಿರಂತರ ಆಯ್ಕೆ ಮಾಡಿ ಈ ಸ್ಥಾನ ಪಡೆಯಲು ಕಾರಣರಾದ ವಾರ್ಡಿನ ಜನತೆಗೆ ದೊರಕಿದ ಸನ್ಮಾನವೆಂದು ತಿಳಿಯುತ್ತೇನೆ. ನನ್ನ ಅವಧಿಯಲ್ಲಿ ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆಂದೂ, ನನ್ನನ್ನು ಅಭಿನಂದಿಸಿದ ತಮಗೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ಕುಲಶೇಖರದಲ್ಲಿ ಅಪಾರ ಕೆಲಸ ಮಾಡಿ ಜನಮನ ಗೆದ್ದ ಭಾಸ್ಕರಣ್ಣ, ಇತ್ತೀಚೆಗೆ ಕುಡುಪು ದೇವಳದ ಜೀರ್ಣೋದ್ಧಾರ ಅಭೂತಪೂರ್ವವಾಗಿ ಮಾಡಿದ್ದರಿಂದ ದೇವರ ಪ್ರಸಾದವಾಗಿ ಮೇಯರ್ ಹುದ್ದೆ ಒಲಿದು ಬಂದಿದೆ ಎಂದು ಟ್ರಸ್ಟಿ ದಯಾನಂದ್ ಜಿ. ಕತ್ತಲ್‌ಸಾರ್ ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಫೋರ್ ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕರಾದ ಇ. ಫೆರ್ನಾಂಡಿಸ್, ಪುಷ್ಪರಾಜ್ ಪೂಜಾರಿ, ಕೆಎಚ್‌ಬಿ ಲೇಔಟ್ ಮಾಲಕರ ಸಂಘದ ಅಧ್ಯಕ್ಷ ಜನಾರ್ಧನಬಾಬು, ದ.ಕ. ಕುಲಾಲ ಸಂಘದ ಅಧ್ಯಕ್ಷ ಸುಜೀರ್ ಕುಡುಪು, ಪೆಜಿನಲ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಕುಡುಪು ಹಿಂದೂ ಸೇವಾ ಸಮಿತಿಯ ಸಂಚಾಲಕ ಭಾಸ್ಕರ್ ಎಂ. ನೂತನ ಮೇಯರ್‌ರವರಿಗೆ ಶುಭ ಹಾರೈಸಿದರು.

ಮಂದಿರದ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್, ಖಜಾಂಚಿ ಗಿರೀಶ್, ಟ್ರಸ್ಟಿಗಳಾದ ಅರುಣ್ ಕುಮಾರ್, ನೀನಾ ಅಶೋಕ್, ಶಶಿಕಲಾ ಬಾಲನ್, ಶಶಿಕಲಾ ರೋಹಿತ್, ರಾಜೇಂದ್ರ ಪ್ರಸಾದ್, ಸೇವಾ ಸಮಿತಿ ಅಧ್ಯಕ್ಷ ಕೂಸಪ್ಪ ಪಾಲ್ದಾನೆ, ಮಾತೃಮಂಡಳಿಯ ಅಧ್ಯಕ್ಷ ರತ್ನಧೇವ್ಗೇಜಿ ರಾವ್, ಕಟ್ಟಡ ಸಮಿತಿಯ ಅಧ್ಯಕ್ಷ ಶ್ರೀನಿವಾಸ, ಯಕ್ಷವೃಂದದ ಸಂಚಾಲಕ ದಿನೇಶ್, ಯುವ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ್ ಮತ್ತು ಅನೇಕ ಕಾರ್ಯಕರ್ತರು ಮೇಯರ್‌ರವರನ್ನು ಅಭಿನಂದಿಸಿದರು.

ಟ್ರಸ್ಟಿ ಅಶೋಕ್ ಧನ್ಯವಾದ ಸಮರ್ಪಿಸಿದರು ಹಾಗೂ ಪ್ರವೀಣ್ ಮೂಡುಶೆಡ್ಡೆ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English