ಸಿಐಟಿಯು ನೇತೃತ್ವದಲ್ಲಿ ಭವಿಷ್ಯನಿಧಿ ಕಚೇರಿಗೆ ಕಾರ್ಮಿಕರಿಂದ ಬೃಹತ್ ಮುತ್ತಿಗೆ

6:11 PM, Tuesday, March 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

CPF-officeಮಂಗಳೂರು: ದಿನಾಂಕ 13-03-2018 ರಂದು ಮಂಗಳೂರು ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆಗೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮುತ್ತಿಗೆ ಕಾರ್ಯಕ್ರಮವು ನಡೆಯಿತು. ಸಂಸ್ಥೆಯಲ್ಲಿರುವ ಸದಸ್ಯರಿಗೆ ಆಧಾರ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪ್ರೊವಿಡೆಂಟ್ ಪಂಡ್ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು, ಪಿಂಚಣಿದಾರರಿಗೆ ಅವರ ಸೌಲಭ್ಯವನ್ನು ಪಡೆಯುವರೇ ಕ್ರಮ ನಿಯಮವನ್ನು ಸರಳೀಕರಣಗೊಳಿಸಬೇಕು, ಪಿಂಚಣಿದಾರರ ಜೀವಿತ ಪ್ರಮಾಣ ಪತ್ರಕ್ಕಾಗಿ ಪ್ರತಿ ಬ್ಯಾಂಕಿನಲ್ಲಿಯೇ ಹೆಬ್ಬೆಟ್ಟು ಗುರುತು ಪಡೆಯುವ ವ್ಯವಸ್ಥೆ ಮಾಡಬೇಕು, ಎಲ್ಲಾ ಪ್ರೊವಿಟೆಂಟ್ ಪಂಡ್ ಖಾತೆದಾರರ ಹಣ ಅವರಿಗೆ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಒತ್ತಾಯಿಸಿ ಈ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೃಹತ್ ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ ನವ ಉದಾರೀಕರಣ ನೀತಿಯನ್ನು ವೇಗವಾಗಿ ಜಾರಿ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಹಿತಾಸಕ್ತಿಗಿಂತಲೂ ಕಾರ್ಪರೇಟ್ ರಂಗದವರ ಹಿತಾಸಕ್ತಿಯನ್ನು ಕಾಪಾಡುತ್ತಿದೆ.

CPF-office-2ಸಾಮಾಜಿಕ ಭದ್ರತೆಯನ್ನು ಕೂಡಾ ಈ ಕಾರಣಕ್ಕಾಗಿ ನಾಶ ಮಾಡುತ್ತಿದೆ. ಸಾಮಾಜಿಕ ನ್ಯಾಯ ಎಂಬುದು ಗಗನ ಕುಸುಮವಾಗಿದೆ. ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸುವಂತಿಲ್ಲವೆಂದರೂ ಪ್ರೊವಿಡೆಂಟ್ ಪಂಡ್ ಇಲಾಖೆ ಆಧಾರ್ ಕಾರ್ಡ್ ಕಡ್ಡಾಯವೆನ್ನುತ್ತಿದೆ.

ಇದರಿಂದಾಗಿ ಬೀಡಿ ಹಾಗೂ ಇತರ ಕಾರ್ಮಿಕರು ದಾಖಲೆ ಪತ್ರವನ್ನು ಸರಿಪಡಿಸಲು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಪಡುವಂತಾಗಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲದ ಸ್ಥಿತಿ ಎಂದು ತೀರ್ಮಾನಕ್ಕೆ ಬಂದು ತಮ್ಮ ಬದುಕುವ ಅವಧಿಯನ್ನು ಕಡಿತಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ. ಅವಿದ್ಯಾವಂತರ ಸ್ಥಿತಿ ಚಿಂತಾಜನಕವಾಗಿದೆ.

ಜೀವಿತ ಪ್ರಮಾಣ ಪತ್ರ ಪಡೆಯಲು ಪ್ರಾಯದ ಕಾರ್ಮಿಕರು ವಿಪರೀತ ಪರಿತಪಿಸುವಂತಾಗಿದೆ. ಕೆಲವು ಕಾರ್ಮಿಕರು ತಮಗೆ ನ್ಯಾಯೋಚಿತವಾಗಿ ಸಿಗಬೇಕಾದ ಪಿಂಚಣಿಯನ್ನು ಕೈಚೆಲ್ಲಿ ಮರಣ ಅಪ್ಪುವ ಹಂತಕ್ಕೆ ಬಂದು ತಲುಪಿದ್ದಾರೆ. ಇದಕ್ಕೆ ಕೇಂದ್ರ ಸರಕಾರವೇ ಕಾರಣ ಎಂದು ಅವರು ಆಪಾದಿಸಿದರು. ಸಮಸ್ಯೆಗಳಿಗೆ ಪರಿಹಾರ ಸಿಗದೆ ಇಲ್ಲಿಂದ ಕದಲುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಬೀಡಿ ಕಾರ್ಮಿಕರಿಗೆ ಪ್ರೊವಿಡೆಂಟ್ ಪಂಡ್ ಆಗಬೇಕೆಂದು ಅಂದು ಹೋರಾಟ ಮಾಡಿ ಯಶಸ್ವಿಯಾದ ಸಿಐಟಿಯು ಇಂದು ಅದರ ಸೌಲಭ್ಯ ವಂಚನೆಗೊಳಗಾಗುವಾಗ ಕಾರ್ಮಿಕರ ಪರ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದ.ಕ.ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು)ನ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿಯವರು ಹೇಳಿದರು. ಅವರು ಮುಂದುವರಿದು 70ರ ದಶಕದಲ್ಲಿ ಆರಂಭವಾದ ಕಾರ್ಮಿಕರ ಪ್ರೊವಿಡೆಂಟ್ ಪಂಡ್ 1995ರಲ್ಲಿ ತಿದ್ದುಪಡಿ ಆಗಿ ಪಿಂಚಣಿಯಾಗಿ ಪರಿವರ್ತನೆಯಾಗುವ ಹಂತಗಳ ತನಕ ಕಾರ್ಮಿಕರ ತೀವ್ರತರವಾದ ಹೋರಾಟ ನಡೆದಿದೆ. ಬೀಡಿ ಕಾರ್ಮಿಕರ ಹೋರಾಟದ ಮೇಲೆ ಅಂದು ರಕ್ತಸಿಕ್ತ ಲಾಠಿಚಾರ್ಜ್‌ನ್ನು ಪೋಲೀಸರು ನಡೆಸಿದ್ದಾರೆ.

ಅಂದಿನ ಕಾರ್ಮಿಕರ ತ್ಯಾಗ ಬಲಿದಾನ ಹಾಗೂ ಅಂದಿನ ನಾಯಕರು ಮಾಡಿದ ತೀವ್ರತರದ ಅನ್ನಸತ್ಯಾಗ್ರಹ ಬೀಡಿ ಕಾರ್ಮಿಕರಿಗೆ ಪ್ರೊವಿಡೆಂಟ್ ಪಂಡ್ ಲಗಾವುಗೊಳಿಸಿರುವುದರಿಂದ ಬೀಡಿ ಕಾರ್ಮಿಕರು ಪಿಂಚಣಿಯನ್ನು ಪಡೆಯುವುದರ ಮುಖಾಂತರ ಸ್ವಲ್ಪ ಉಸಿರು ಬಿಡುವಂತಾಗಿದೆ ಎಂದರು. ಸರಕಾರ ಹಾಗೂ ಇಲಾಖೆಗಳ ಅನಗತ್ಯ ಮಧ್ಯಪ್ರವೇಶದಿಂದಾಗಿ ಕಾರ್ಮಿಕರು ಅನಗತ್ಯ ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯನಿಧಿಯ ಅಧಿಕಾರಿಗಳು ಎಲ್ಲಾ ಸೌಲಭ್ಯಗಳು ನ್ಯಾಯೋಚಿತವಾಗಿ ಸಿಗಬೇಕಾದ ಕಾರ್ಮಿಕನಿಗೆ ಲಭ್ಯವಾಗುವಂತೆ ನಿಗಾವಹಿಸಬೇಕು ಎಂದು ಅವರು ಆಗ್ರಹಪಡಿಸಿದರು.

ಪ್ರತಿಭಟನಾ ಪ್ರದರ್ಶನಗಾರರನ್ನು ಉದ್ದೇಶಿಸಿ ಸಿಐಟಿಯುನ ಮುಂದಾಳುಗಳಾದ ಯು.ಬಿ.ಲೋಕಯ್ಯ, ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಡಿವೈಎಫ್‌ಐನ ನಾಯಕ ನಿತಿನ್ ಕುಮಾರ್ ಕುತ್ತಾರ್, ಜಿಲ್ಲಾ ಅಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಂದಾಳುಗಳಾದ ಪದ್ಮಾವತಿ ಶೆಟ್ಟಿ, ಜಯಂತಿ ಬಿ.ಶೆಟ್ಟಿ, ಭಾರತಿ ಬೋಳಾರ್‌ರವರುಗಳು ಮಾತನಾಡಿದರು.

ಭವಿಷ್ಯನಿಧಿಯ ಅಧಿಕಾರಿಗಳು ಸಿಐಟಿಯು ಉನ್ನತ ಮಟ್ಟದ ನಿಯೋಗದೊಂದಿಗೆ ಸುಮಾರು ೧ ಗಂಟೆಗಳ ತನಕ ಚರ್ಚೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಕಂಡುಕೊಳ್ಳುವ ಭರವಸೆಯನ್ನು ನೀಡಿದರು.

ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಕಾರ್ಮಿಕ ಮುಂದಾಳುಗಳಾದ ಸದಾಶಿವ ದಾಸ್, ಬಾಬು ದೇವಾಡಿಗ, ಜಯಂತ ನಾಯ್ಕ್, ಗಂಗಯ್ಯ ಅಮೀನ್, ರಾಮಣ್ಣ ವಿಟ್ಲ, ರಾಧಾ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ರೋಹಿಣಿ, ಗಿರಿಜ ಮೂಡಬಿದ್ರಿ, ರವರುಗಳು ವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English