ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಮಾರ್ಚ್ 12 ಮತ್ತು 13 ರಂದು ಸ್ಕೊಬ ಡೈವಿಂಗ್ ಸಲಕರಣೆಗಳನ್ನು ಪರಿಶೀಲಿಸಿ ತರಬೇತಿಯನ್ನು ನೀಡಲಾಯಿತು. ಈ ತರಬೇತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಿಂದ ನುರಿತ ಈಜುಗಾರರು ಹಾಗೂ ಜಿಲ್ಲಾ ಗೃಹರಕ್ಷಕ ದಳದಿಂದ ನುರಿತ ಈಜುಗಾರರಾದ ಉಪ್ಪಿನಂಗಡಿ ಘಟಕದ ಇಸ್ಮಾಯಿಲ್, ಸುದರ್ಶನ್, ವಸಂತ, ಸುಳ್ಯ ಘಟಕದಿಂದ ಪ್ರಭಾಕರ ಪೈ, ಪಣಂಬೂರು ಘಟಕದಿಂದ ರಾಕೇಶ್, ಪುತ್ತೂರು ಘಟಕದಿಂದ ಪ್ರಜ್ವಲ್ ಡಿ’ಸೋಜ, ಬೆಳ್ತಂಗಡಿ ಘಟಕದಿಂದ ಕೇಶವ, ಸುರತ್ಕಲ್ ಘಟಕದಿಂದ ಪಡಿಯಪ್ಪ ಅಣ್ಣಿಗೇರಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕರು ಹಾಜರಾಗಿದ್ದರು.
ಈ ತರಬೇತಿಯಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ ಮುರಳಿ ಮೋಹನ್ ಚೂಂತಾರು, ಉಪಸಮಾದೇಷ್ಟ ರಮೇಶ್, ಜಿಲ್ಲಾ ಅಗ್ನಿಶಾಮಕ ಠಾಣೆಯ ಅಧಿಕಾರಿ ಶೇಖರ್, ಎಸ್‍ಪಿ ಕಚೇರಿಯ ಪ್ರೀತೇಶ್ ಮತ್ತು ಮಂಗಳಾ ಈಜುಕೊಳದ ರಮೇಶ್ ಕುಮಾರ್ ಉಪಸ್ಥಿತರಿದ್ದರು
Click this button or press Ctrl+G to toggle between Kannada and English