ಮಂಗಳೂರು: ಮಂಗಳೂರು ನಗರ ದಕ್ಷಿಣದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಲು ಜನ ಮಾನಸಿಕವಾಗಿ ಸಿದ್ಧರಾಗಿದ್ದಾರೆ.
ಮನೆಮನೆ ಸಂಪರ್ಕಕ್ಕೆ ಹೋಗುವಾಗ ಜನರ ವಿಶ್ವಾಸ ಬಿಜೆಪಿಯ ಮೇಲಿರುವುದು ಸ್ಪಷ್ಟವಾಗುತ್ತಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಅವರು ಮಂಗಳವಾರ ಮಿಲಾಗ್ರಿಸ್, ಜೆಪ್ಪು, ಅಳಪೆ, ಸರಿಪಳ್ಳ, ಬಿಜೈ ಪ್ರದೇಶಗಳಲ್ಲಿ ಮನೆ ಮನೆ ಸಂಪರ್ಕ ಅಭಿಯಾನದಡಿಯಲ್ಲಿ ನಾಗರಿಕರನ್ನು ಭೇಟಿ ಮಾಡಿ ನಂತರ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ವಸಂತ ಪೂಜಾರಿ, ಡೋನಾಲ್ಡ್ ಜೀವನ, ಭರತ್, ಸುರೇಖ ರಾವ್, ಪ್ರಶಾಂತ್ ಆಳ್ವ, ಕಾತ್ಯಾಯಿನಿ ರಾವ್, ಅಮಿತಾ ರಾವ್ ಸಹಿತ ಅನೇಕರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English