ಮಂಗಳೂರು: ಬೇಸಿಗೆಯ ಬಿಸಿ ಆರಂಭವಾಗುತ್ತಿರುವಂತೆಯೇ ಕರಾವಳಿಯಲ್ಲಿ ವರುಣ ಪ್ರತ್ಯಕ್ಷನಾಗಿದ್ದಾನೆ.
ಇಂದು ಅಪರಾಹ್ನ ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿದಂತೆ ಕರಾವಳಿಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಒತ್ತಡದಿಂದ ವಾಯುಭಾರ ಕುಸಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.
Click this button or press Ctrl+G to toggle between Kannada and English