ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅಲೆ: ಯು.ಟಿ.ಖಾದರ್

10:06 AM, Friday, March 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

rahul-gandhiಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.20ರಂದು ನಗರಕ್ಕೆ ಆಗಮಿಸಲಿದ್ದು, ಈಗಾಗಲೇ ಜಿಲ್ಲೆಯಲ್ಲಿ ಅವರ ಪರವಾದ ಅಲೆ ಜೋರಾಗಿದೆ. ಈ ಅಲೆಯಲ್ಲಿ ಯಾರ್ಯಾರು ಕೊಚ್ಚಿ ಹೋಗಲಿದ್ದಾರೆ ಎಂಬುವುದನ್ನು ಹೇಳಲಾಗದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.20ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಕ್ಷೇತ್ರದಿಂದ ಸುಮಾರು 15000 ಮಂದಿ ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯಿಂದ ಸುಮಾರು 75000 ಮಂದಿ ಸೇರುವ ನಿರೀಕ್ಷೆ ಇದೆ. ಅದಕ್ಕಾಗಿಯೇ ವಿಶಾಲವಾದ ನೆಹರೂ ಮೈದಾನದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿ ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಮೂಲ್ಕಿಯಲ್ಲಿ ರೋಡ್ ಶೋ, ಸುರತ್ಕಲ್‌ನಲ್ಲಿ ಸಮಾವೇಶ ಇದೆ ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಮತ್ತು ತೂಕದಲ್ಲಿ ಯಾವುದೇ ರೀತಿಯ ರಾಜಿ ಇರುವುದಿಲ್ಲ. ಗ್ರಾಹಕರು ತಾವು ಪಡೆಯುವ ಆಹಾರದ ತೂಕವನ್ನು ಖಾತರಿಪಡಿಸಲು ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್‌‌ನಲ್ಲಿ ಇಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸಲು ನಿರ್ಧರಿಸಲಾಗಿದೆ. ಕ್ಯಾಂಟೀನ್‌ನಲ್ಲಿ ಟೋಕನ್ ನೀಡುವ ಸಂದರ್ಭ ಹಿರಿಯ ನಾಗರಿಕರು, ಒಂಟಿ ಮಹಿಳೆ ಹಾಗೂ ವಿಕಲಚೇತನರಿಗೆ ಆದ್ಯತೆ ನೀಡಬೇಕು.

ಪ್ರಸ್ತುತ ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರು ಹಾಗೂ ಮೊಸರನ್ನ ನೀಡಲಾಗುತ್ತಿದೆ. ಉಪ್ಪಿನಕಾಯಿ ಹಾಗೂ ಪಲ್ಯವನ್ನು ಸೇರಿಸಲು ಬೇಡಿಕೆ ಬಂದಿದೆ. ಉಪ್ಪಿನಕಾಯಿಯನ್ನು ಒದಗಿಸಲಾಗುವುದು. ಪಲ್ಯದ ತಯಾರಿಕೆ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಗೆ ಪೂರಕವಾದ ಮೆನು ಅಳವಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English