ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜೀರ್ಣೋದ್ಧಾರ ಪ್ರಕ್ರಿಯೆಗಳು ನಡೆಯುವುದರಿಂದ ದೈವಜ್ಞರ ಸಲಹೆಯಂತೆ ಶಿಷ್ಟಾಚಾರಕ್ಕೆ ಅಪಚಾರವಾಗದಂತೆ ಕಾಲಾವಧಿ ಜಾತ್ರೆ ನಡೆಯಲಿದೆ.
ಬುಧವಾರ ರಾತ್ರಿ ಉಳಿಪಾಡಿಗುತ್ತಿನಿಂದ ದೈವದ ಭಂಡಾರ ಮತ್ತು ಅಡ್ಡೂರು ನಂದ್ಯದಿಂದ ಭಗವತೀ ದೈವದ ಭಂಡಾರ ಬಂದು ಧ್ವಜಾರೋಹಣವಾಯಿತು. ಗುರುವಾರ ಬೆಳಗ್ಗೆ ಕಂಚುಬಲಿ ಉತ್ಸವ ನಡೆದು ಅನಂತರ ಕುದಿ ಕರೆಯುವ ವಿಶಿಷ್ಟ ಪದ್ಧತಿಯ ಪ್ರಕಾರ ಜಾತ್ರೋತ್ಸವದ 30 ದಿನಗಳೆಂದು ನಿಗದಿತವಾಯಿತು.
ಇದರಂತೆ ಎ.7ರಂದು ಒಂದನೇ ಚೆಂಡು, 8ರಂದು ಎರಡನೇ ಚೆಂಡು, 9ರಂದು ಮೂರನೇ ಚೆಂಡು, 10ರಂದು ನಾಲ್ಕನೇ ಚೆಂಡು, 11ರಂದು ಕಡೆ ಚೆಂಡು, 12ರಂದು ಮಹಾ ರಥೋತ್ಸವ, ಎ.13ರಂದು ಆರಾಡ ನಡೆಯಲಿದೆ. ಪ್ರತಿ ದಿನ ಸಂಜೆ 6.30ಕ್ಕೆ ಜಾತ್ರೆ ಪ್ರಾರಂಭವಾಗಲಿದೆ.
Click this button or press Ctrl+G to toggle between Kannada and English