ಸರಕಾರಿ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ರದ್ದುಗೊಳಿಸಲು ಶಾಲಾ ಶಿಕ್ಷಕರ ಒತ್ತಾಯ

2:44 PM, Friday, March 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

j-r-loboಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಕಡ್ಡಾಯ ವರ್ಗಾವಣೆಯ ನೆಪದಲ್ಲಿ ನಗರ ಪ್ರದೇಶದ ಸರಕಾರಿ ಶಾಲಾ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಗಳಿಗೆ ಕಳುಹಿಸುವ ಕ್ರಮವು ತೀರಾ ಅವೈಜ್ಞಾನಿಕವಾಗಿದ್ದು, ಈಗಾಗಲೇ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಸರಕಾರಿ ಶಾಲಾ ಶಿಕ್ಷಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಎಸ್‌ಎಫ್‌ಐ, ಡಿವೈಎಫ್‌ಐ ಮಾರ್ಗದರ್ಶನದಲ್ಲಿ ಸರಕಾರಿ ಶಾಲಾ ಶಿಕ್ಷಕರು ಇಂದು (15-03-18) ದ.ಕ. ಜಿಲ್ಲಾಧಿಕಾರಿಗಳು, ಸಚಿವರಾದ ಯು.ಟಿ. ಖಾದರ್, ಶಾಸಕರಾದ ಜೆ.ಆರ್. ಲೋಬೊ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಐವನ್ ಡಿ’ಸೋಜರವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿದರು.

ಶಿಕ್ಷಣ ಇಲಾಖೆಯು ಒಂದು ಜಿಲ್ಲೆಯನ್ನು ಒಂದು ಘಟಕವಾಗಿ ಪರಿಗಣಿಸಿ, ಅದನ್ನು ಎಬಿಸಿ ವಲಯಗಳನ್ನಾಗಿ ಪರಿಗಣಿಸಿರುವುದು ತೀರಾ ಹಾಸ್ಯಸ್ಪದವಾಗಿದೆ. ಇದರಿಂದಾಗಿ ಮಂಗಳೂರಿನ ಶಿಕ್ಷಕರು ದೂರದ ಸುಳ್ಯ-ಪುತ್ತೂರಿನ ಗ್ರಾಮಾಂತರ ಶಾಲೆಗೆ ವರ್ಗಾವಣೆಯಾಗಲಿದ್ದು, ಸುಮಾರು ೩-೪ ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ವರ್ಗಾವಣೆಗೊಂಡರೂ ಅಲ್ಲಿ ಸರಿಯಾದ ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲ. ಇತರ ಇಲಾಖೆಗಳಿಗಿರುವಂತೆ ವಸತಿ ಗೃಹಗಳಿಲ್ಲ. ಬಹುತೇಕ ಶಿಕ್ಷಕರು ಮಹಿಳೆಯರಾಗಿದ್ದು, ಹಲವಾರು ಮಂದಿ 2-3ವರ್ಷಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ನಿವೃತ್ತಿ ಅಂಚಿನಲ್ಲಿರುವವರನ್ನು ಕಡ್ಡಾಯ ವರ್ಗಾವಣೆ ಮಾಡಬಾರದೆಂದು ಸರಕಾರದ ನಿಯಮವಿದ್ದರೂ ವರ್ಗಾವಣೆ ಮಾಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಶಿಕ್ಷಕರು, ಈಗಾಗಲೇ ಹೊರಡಿಸಿರುವ ಆದೇಶವನ್ನು ತಡೆಹಿಡಿದು ಮಾನಸಿಕವಾಗಿ ನೊಂದಿರುವ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಹಾಗೂ ವರ್ಗಾವಣೆ ಕಡ್ಡಾಯವಾಗಬಾರದು ಬದಲಾಗಿ ಐಚ್ಛಿಕವಾಗಿರಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English