ಮೋದಿ ಆರೋಪಕ್ಕೆ ಮೊಯ್ಲಿ ಸಾಕ್ಷಿ ನೀಡಿದ್ದಾರೆ: ವಾಮನ್‌ ಆಚಾರ್ಯ

5:10 PM, Friday, March 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

vaman-acharyaಬೆಂಗಳೂರು: ಕರ್ನಾಟಕ ಸರ್ಕಾರ ಪರ್ಸೆಂಟೇಜ್ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಆರೋಪಕ್ಕೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಟ್ವೀಟ್ ಮೂಲಕ ಸಾಕ್ಷಿ ಒದಗಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಡಾ. ವಾಮನ್ ಆಚಾರ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಆದ ತಕ್ಷಣವೇ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಮನೆಯಲ್ಲಿ ಗರಿ ಗರಿ ನೋಟುಗಳು ಸಿಕ್ಕಾಗಲೇ ಪರ್ಸೆಂಟೇಜ್ ವ್ಯವಹಾರದ ಸಾಕ್ಷಿ ಸಿಕ್ಕಿತ್ತು. ಆದರೆ ಸರ್ಕಾರ ಇಬ್ಬರೂ ಇಂಜಿನಿಯರ್‌ಗಳ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದರು.

ಆದರೆ, ಈಗ ವೀರಪ್ಪ ಮೊಯ್ಲಿ ಮತ್ತು ಅವರ ಪುತ್ರ ಕೊಳೆತು ಹೋಗಿರುವ ಕಾಂಗ್ರೆಸ್ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲುವ ಧೈರ್ಯ ತೋರಿಸುದ್ದಾರೆ. ಹಾಗಾಗಿ ಅವರಿಬ್ಬರನ್ನೂ ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English