ಮೋದಿ ಜನಪರ ಯೋಜನೆಗಳ ಲಾಭ ರಾಜ್ಯದ ಜನರಿಗೂ ಸಿಗಬೇಕು- ಡಿ ವೇದವ್ಯಾಸ ಕಾಮತ್

10:08 PM, Sunday, March 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

vedavyasaಮಂಗಳೂರು  : ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸದೇ ವಂಚಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಶ್ರೇಷ್ಟ ಯೋಜನೆಗಳ ಲಾಭವನ್ನು ಜನರು ಪಡೆಯಬೇಕು. ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಜನಪರ ಯೋಜನೆಗಳಿಗೆ ಚಾಲನೆ ನೀಡಲಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ಮಂಗಳೂರು ನಗರ ದಕ್ಷಿಣದಲ್ಲಿ ಮನೆಮನೆ ಸಂಪರ್ಕ ಅಭಿಯಾನದ ಅಂಗವಾಗಿ 51 ನೇ ವಾರ್ಡ್ ಅಳಪೆ ಉತ್ತರದಲ್ಲಿ ಕಾರ್ಯಕರ್ತರ ಮತ್ತು ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರದ ಎಷ್ಟೋ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುವ ಹೊಣೆ ರಾಜ್ಯ ಸರಕಾರದ್ದು. ಆದರೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಎಲ್ಲವನ್ನು ಮುಚ್ಚಿ ಹಾಕುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದಲ್ಲಿ ಮೋದಿಯವರ ಕನಸು ರಾಜ್ಯದಲ್ಲಿ ಹರಡಲು ಚಾಲನೆ ಸಿಗುತ್ತದೆ ಎಂದರು. ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಗ್ಯಾಡ್ವಿನ್ ಡಿಸೋಜಾ, ಪ್ರವೀಣ್ ಶೆಟ್ಟಿ, ರವಿಕುಮಾರ್, ಯಕ್ಷಿತ್, ಶಿವರಾಂ ಗೌಡ, ಶಂಕರ್ ಸಪಾಲಿಗ, ಎಡ್ವಿನ್ ಗೊನ್ಸಲ್ವೇಸ್, ಟಿ ಮೋನಪ್ಪ ಶೆಟ್ಟಿ, ಜಗನ್ನಾಥ ರೈ, ಕೋಮಲ ಶೆಟ್ಟಿ, ಅಜಯ್ ರಾವ್ ಮುಂತಾದವರು ಉಪಸ್ಥಿತರಿದ್ದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English