ನಟಿ ಚೈತ್ರ ದಾಂಪತ್ಯದಲ್ಲಿ ಬಿರುಕು… ಪತಿಯ ವಿರುದ್ಧ ದೈಹಿಕ ಕಿರುಕುಳ ಆರೋಪ

11:35 AM, Tuesday, March 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

chaitra-pothrajಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಚೈತ್ರ ಪೋತ್‌ರಾಜ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತಿಯ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚೈತ್ರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಪತಿ ಬಾಲಾಜಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿರುವ ನಟಿ ಚೈತ್ರ, ಇದೇ ತಿಂಗಳು 14 ರಂದು ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ.

chaitra-pothra-2ನಟಿ ಚೈತ್ರ ಹಾಗೂ ಬಾಲಾಜಿ ಪೋತ್‌ರಾಜ್‌ 2006 ರಂದು ಮದುವೆಯಾಗಿದ್ದರು. ಅಂದಿನಿಂದಲೂ ಬಾಲಾಜಿ ತನ್ನ ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಎರಡನೇ ಮಗುವಾದ ಮೇಲಂತೂ ಪತ್ನಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರಂತೆ. ಇದೇ ತಿಂಗಳು 14 ರಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ನಟಿ ಚೈತ್ರ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ಇನ್ನು ಖುಷಿ ಹಾಗೂ ಶಿಷ್ಯ ಚಿತ್ರಗಳಲ್ಲಿ ನಟಿ ಚೈತ್ರ ನಟಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English