ಮಂಗಳೂರು: ಕರಿಂಜೆ ಶ್ರೀಗಳ ಬಗ್ಗೆ ಮಾತನಾಡಿದ್ದ ಅಭಯಚಂದ್ರ ಜೈನ್ ಅವರು ಹಿಂದೂ ವಿರೋಧಿ ಶಾಸಕ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಸೋಮವಾರ ಸ್ವರಾಜ್ಯ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿತು.
ಹಿಂಸೆಯನ್ನು ಮಾಡದಂತಹ ಸಮಾಜದಿಂದ ಬಂದವರು ಶಾಸಕ ಅಭಯಚಂದ್ರ ಜೈನ್. ಸಂತರನ್ನು ಒಬ್ಬ ಸಾಮಾನ್ಯ ವ್ಯಕ್ತಿ ನಿಂದಿಸಿದರೆ ಕ್ಷಮಿಸಬಹುದು. ಆದರೆ ಶಾಸಕರಂತಹ ವ್ಯಕ್ತಿ ನಿಂದಿಸಿದರೆ ಕ್ಷಮಿಸಲಾರೆವು. ನಾವು ಕಾವಿ ತೊಡುವವರು, ಸಂತರಲ್ಲಿ ನಿಮ್ಮ ದರ್ಪ ತೋರಿಸಿದರೆ ಕಾವಿ ಅಗ್ನಿ ವಸ್ತ್ರವಾಗಿ ನಿಮ್ಮನ್ನು ಸುಡಬಹುದು. ಆದ್ದರಿಂದ ನೀವು ರಾಜಕೀಯ ಸಂತರಾಗಿ ಇಲ್ಲದಿದ್ದರೆ ನಿಮ್ಮನ್ನು ಮನೆಗೆ ಕಳುಹಿಸುವ ಮೂಲಕ ನಾವೇ ನಿಮ್ಮನ್ನು ಸಂತರನ್ನಾಗಿಸುತ್ತೇವೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಜೈನ್ ಅವರು ಹಿಂಸಾತ್ಮಕ ನಡೆ ನುಡಿಯ ಮಾರ್ಗದಲ್ಲಿ ಮುಂದಾಗಿರುವುದು ಸರಿಯಿಲ್ಲ. ತಾಕತ್ತಿದ್ದರೆ ಅವರು ವಜ್ರದೇಹಿಯ ಸುದ್ದಿಗೆ ಬರಲಿ. ತಾನು ಸುಮ್ಮನಿರುವ ಸಂತನಲ್ಲ. ನೇರ ವಿಧಾನಸೌಧಕ್ಕೂ ಬಂದು ಜರೆಯುತ್ತೇನೆ ಎಂದು ಗುಡುಗಿದ ಅವರು, ಶಾಸಕರು ಕರಿಂಜೆ ಶ್ರೀಗಳವರನ್ನು ಅಪಮಾನಿಸಿದ್ದಾಗಿದೆ. ಇನ್ನೀಗ ಕಾಲು ಮುಟ್ಟಿ ಕ್ಷಮೆಯಾಚಿಸಿದರೂ ಅವರು ಮುಂದಿನ ಚುನಾವಣೆಯಲ್ಲಿ ಸೋಲುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದವರು ಹೇಳಿದರು
Click this button or press Ctrl+G to toggle between Kannada and English