ಸ್ಪೈಸ್‌ಜೆಟ್‌ ಮಂಗಳೂರು-ಹೈದರಾಬಾದ್‌ ಪ್ರಯಾಣ ದರ ರೂ. 1,499

1:03 PM, Saturday, October 1st, 2011
Share
1 Star2 Stars3 Stars4 Stars5 Stars
(4 rating, 6 votes)
Loading...

Spice Jet

ಮಂಗಳೂರು: ಸ್ಪೈಸ್‌ಜೆಟ್‌ ಲಿಮಿಟೆಡ್‌ ಮಂಗಳೂರು-ಹೈದರಾಬಾದ್‌ ನಡುವೆ ವಿಮಾನ ಸಂಚಾರವನ್ನು ನೂತನ ಅತ್ಯಾಧುನಿಕ Q – 400 ವಿಮಾನದೊಂದಿಗೆ ಶುಕ್ರವಾರ ಆರಂಭಿಸಿತು.ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ವಿ. ರಾಜಾ ಮೊದಲ ವಿಮಾನ ಹೈದರಾಬಾದ್‌ನಿಂದ ಮಧ್ಯಾಹ್ನ 1 ಗಂಟೆಗೆ ನಿರ್ಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.40ಕ್ಕೆ ಇಳಿಯಲಿದೆ. ಮೊದಲ ವಿಮಾನದಲ್ಲಿ ಹೈದರಾಬಾದ್‌ನಿಂದ 67 ಮಂದಿ ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದು ಇಲ್ಲಿಂದ 73 ಮಂದಿ ತೆರಳಿದ್ದಾರೆ ಎಂದರು.ಈ ಮಾರ್ಗದಲ್ಲಿ ನಿತ್ಯ ಎರಡು ಸಂಚಾರ ನಡೆಸಲಿದೆ. ಮಂಗಳೂರು- ಹೈದರಾಬಾದ್‌ ನಡುವೆ ಎರಡನೇ ವಿಮಾನ ಮಂಗಳೂರಿನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಸಂಜೆ 4.40ಕ್ಕೆ ಹೈದರಾಬಾದ್‌ಗೆ ತಲುಪಲಿದೆ. ಪ್ರಯಾಣಿಕರಿಗೆ ಆರಂಭಿಕ ದರವು 1,499 ರೂ. ಆಗಿದೆ ಸ್ಪೈಸ್‌ಜೆಟ್‌ ಈ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಆರಂಭಿಸಿರುವ ಮೊದಲ ಸಂಸ್ಥೆಯಾಗಿದೆ ಎಂದು ಹೇಳಿದರು.

Q-400 ಮೂಲಕ ವೈಮಾನಿಕ ಸಂಪರ್ಕ ಕಲ್ಪಿಸುತ್ತಿರುವ ಎರಡನೇ ನಗರ ಮಂಗಳೂರು ಆಗಿದೆ. ನ. 9ರಿಂದ ಮಂಗಳೂರು- ಚೆನೈ ನಡುವೆ ನಿತ್ಯ ವಿಮಾನ ಸಂಚಾರ ಸೇವೆಯನ್ನು ಆರಂಭಿಸಲಿದೆ. ಕ್ಯೂ-400 ಏರ್‌ಕ್ರಾಫ್ಟ್ ಒಟ್ಟು 78 ಆಸನಗಳನ್ನು ಹೊಂದಿದ್ದು, ಸಂಸ್ಥೆ ಸುಮಾರು 30 ವಿಮಾನಗಳ ಖರೀದಿಗೆ ಆದೇಶ ನೀಡಿದ್ದು ಸೆಪ್ಟಂಬರ್‌ ತಿಂಗಳಿನಲ್ಲಿ 5ರ್‌ಕ್ರಾಫ್ಟ್ ಗಳನ್ನು ಪಡೆದುಕೊಂಡಿದೆ. ಸ್ಪೈಸ್‌ಜೆಟ್‌ ತ್ವರಿಗತಗತಿಯಲ್ಲಿ ತನ್ನ ದೇಶೀಯ ಸೇವೆಯನ್ನು ವಿಸ್ತಾರಗೊಳಿಸುತ್ತಿದೆ ಎಂದು ಚೀಫ್‌ ಕಮರ್ಷಿಯಲ್‌ ಅಫೀಸರ್‌ ಸಮ್ಯುಕ್ತ ಶ್ರೀಧರನ್‌ ವಿವರಿಸಿದರು.

ಸ್ಪೈಸ್‌ಜೆಟ್‌ ಲಿಮಿಟೆಡ್‌ ಪ್ರಸ್ತುತ ಹೈದರಾಬಾದ್‌- ಗೋವಾ, ವಿಶಾಖಪಟ್ಟಣ- ತಿರುಪತಿ, ಹೈದರಾಬಾದ್‌- ಮಧುರೈ, ವಿಶಾಖಪಟ್ಟಣ- ಬೆಂಗಳೂರು ನಡುವೆ ಸೇವೆಯನ್ನು ಆರಂಭಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English