ಸುರತ್ಕಲ್‌ನಲ್ಲಿ ರಾಹುಲ್ ಗಾಂಧಿ… ಮೋದಿ ವಿರುದ್ಧ ತೀವ್ರ ವಾಗ್ದಾಳಿ

5:44 PM, Tuesday, March 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

rahul-surathakalಮಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಕರಾವಳಿಯ ಸುರತ್ಕಲ್‌ಗೆ ಭೇಟಿ ನೀಡಿದರು.

ಇಲ್ಲಿ ನಡೆದ ಬೃಹತ್‌ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ‌‌ ಬಸವಣ್ಣ, ನಾರಾಯಣ ಗುರುಗಳು ನಡೆದಾಡಿದ ನಾಡು. ಅವರ ತತ್ವಾದರ್ಶನಗಳನ್ನು ತಮ್ಮ ಭಾಷಣದಲ್ಲಿ ಪ್ರಯೋಗಿಸುವ ಮೋದಿ ಸುಳ್ಳು ಹೇಳುತ್ತಲೇ ಬರುತ್ತಾರೆ. ಬಸವಣ್ಣನ ನುಡಿದಂತೆ ನಡೆ ತತ್ವದಂತೆ ಮೋದಿಯವರೇ ನೀವು ನಡೆದುಕೊಳ್ಳಿ ಎಂದರು. ಪ್ರಧಾನಿಯಾಗುವ ಮುನ್ನ ಪ್ರತಿಯೊಬ್ಬರ ಖಾತೆಗೂ‌ ಹಣ ಜಮಾ ಮಾಡುವುದಾಗಿ ಹೇಳಿದ್ದಾರೆ. ಅಷ್ಟೆಲ್ಲ ಬೇಡ ಕನಿಷ್ಠ 10 ರೂ. ಆದರೂ ಜಮೆ ಮಾಡಿ ಸಾಕು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.

ಮೋದಿ ನನ್ನ ಮಾತಾಪಿತರನ್ನು ಅಪಮಾನ ಮಾಡುತ್ತಾರೆ. ದೇಶದ ಮಹಿಳೆಯರನ್ನು ಅವಮಾನ ಮಾಡುತ್ತಾರೆ. ಈ ದೇಶದ ರೈತರನ್ನು, ದುರ್ಬಲರನ್ನು ಅವಮಾನ ಮಾಡಿತ್ತಿದ್ದಾರೆ. ಇದು ಇಡೀ ದೇಶಕ್ಕೆ ಮಾಡುವ ಅಪಮಾನ. ಮೋದಿ ತಮ್ಮ ಪಕ್ಷದವರಿಗೇ ಆಡಳಿತಕ್ಕೆ, ಉತ್ತಮ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ಇಡೀ‌‌‌ ಜಗತ್ತನ್ನು‌‌ ಮೋದಿ ಸುತ್ತಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೂ ಮೊದಲು ವಿಶೇಷ ಬಸ್‌ನಲ್ಲಿ ಸುರತ್ಕಲ್‌ಗೆ ಆಗಮಿಸಿದ ರಾಹುಲ್‌ ಅವರನ್ನು ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಾ. ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ರಮಾನಾಥ್ ರೈ, ಕರ್ನಾಟಕದ ಉಸ್ತುವಾರಿ‌ ಕೆ. ವೇಣುಗೋಪಾಲ್, ಸುರತ್ಕಲ್ ಕ್ಷೇತ್ರದ ಶಾಸಕರಾದ ಮೊಯ್ದಿನ್ ಬಾವ ಆತ್ಮೀಯವಾಗಿ ಬರಮಾಡಿಕೊಂಡರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English