ಕೋಲ್ಕತ್ತಾ: ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ನ್ಯಾಯಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಮೊರೆ ಹೋಗಲು ನಿರ್ಧರಿಸಿದ್ದು, ಮಾರ್ಚ್ 23ರಂದು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಪತಿ ಮೊಹಮ್ಮದ್ ಶಮಿ ಅವರು ಅಕ್ರಮ ಸಂಬಂಧ ಹೊಂದಿದ್ದು, ತನಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದ ಪತ್ನಿ ಹಸೀನ್ ಜಹಾನ್ ಗಂಡನ ವಿರುದ್ಧ ಫಿಕ್ಸಿಂಗ್ ಆರೋಪ ಸಹ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿಕೊಳ್ಳುವೆ ಎಂದು ಜಹಾನ್ ತಿಳಿಸಿದ್ದಾರೆ.
ಸಿಎಂ ನನ್ನ ಪರ ಆಗಲಿ, ಶಮಿ ಪರವಾಗಲಿ ಬೆಂಬಲಕ್ಕೆ ಬರಬೇಕಿಲ್ಲ. ಸತ್ಯದ ಪರ, ನ್ಯಾಯಕ್ಕಾಗಿ ಸಿಎಂ ಸಹಾಯಕ್ಕೆ ಬರಬೇಕಿದೆ ಎಂದು ಜಹಾನ್ ಹೇಳಿದ್ದಾರೆ. ಇದು ಸತ್ಯಕ್ಕಾಗಿ ನಡೆಯುತ್ತಿರುವ ಹೋರಾಟ. ಸೆಲೆಬ್ರೆಟಿ ಪತ್ನಿಯ ಹೀನಾಯ ಸ್ಥಿತಿ ಎಲ್ಲರಿಗೂ ತಿಳಿಯಬೇಕಿದೆ. ಕ್ರಿಕೆಟರ್ ಆಗಿರುವ ಶಮಿಗೆ ಖ್ಯಾತಿ, ಹಣ ಇದೆ. ನನಗೆ ಯಾರ ಬೆಂಬಲವೂ ಇಲ್ಲ. ಹಾಗಾಗಿ ಸಿಎಂ ಮೊರೆ ಹೋಗುತ್ತಿರುವುದಾಗಿ ಜಹಾನ್ ಹೇಳಿಕೆ ನೀಡಿದ್ದಾರೆ.
Click this button or press Ctrl+G to toggle between Kannada and English