ಎಬಿವಿಪಿ ಕಾರ್ಯ ಕರ್ತನಿಂದ ಸಚಿವ ವಿ. ಸೋಮಣ್ಣ ನವರಿಗೆ ಚಪ್ಪಲಿ ಸೇವೆ

8:10 PM, Saturday, October 1st, 2011
Share
1 Star2 Stars3 Stars4 Stars5 Stars
(7 rating, 7 votes)
Loading...

V Somanna

ಬೆಂಗಳೂರು  : ನೂತನ ಮುಖ್ಯಮಂತ್ರಿ ಡಿ.ವಿ ಸದಾನಂದ  ಗೌಡರ ಸಂಪುಟದಲ್ಲಿ ಸ್ಥಾನ ಪಡೆದ ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ  ಎಬಿವಿಪಿ ಕಾರ್ಯಕರ್ತನೊರ್ವ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ವಿಧಾನಸೌಧದ ಅಂಗಳದಲ್ಲಿಯೇ (ಅ.1) ಇಂದು ನಡೆಯಿತು.

ಬಿಜೆಪಿ ಆಳ್ವಿಕೆಯಿಂದ ಬೇಸತ್ತು ಸೋಮಣ್ಣನವರ ಮೇಲೆ ಹಲ್ಲೆ ಮಾಡಿದ್ದೇನೆಂದು ಆತ ಹೇಳಿಕೆ ನೀಡಿದ್ದಾನೆ. ಸೋಮಣ್ಣ ಮಾತ್ರವಲ್ಲ, ಬಿಜೆಪಿಯ ಯಾರ ಮೇಲೆಯಾದರೂ ಇದೇ ರೀತಿ ಹಲ್ಲೆ ಮಾಡುವುದಾಗಿ ಆತ ಹೇಳಿದ್ದಾನೆ.

ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮ ಕಚೇರಿಯಿಂದ ಹೊರಬರುತ್ತಿದ್ದರು. ಆಗ ಹೊರಗೆ ಕಾದುಕುಳಿತಿದ್ದ ಪ್ರಸಾದ್ ಬಲಗಾಲಿನ ಚಪ್ಪಲಿ ತೆಗೆದುಕೊಂಡು ಕಪಾಳಕ್ಕೆ ಏಟು ಹಾಕಲು ಶುರುಮಾಡಿದ್ದಾನೆ. ಆಘಾತಗೊಂಡ ಸೋಮಣ್ಣ ಯಾಕೆ ಹೊಡಿಯುತ್ತಿದ್ದಿ ಎಂದು ಕೇಳಿದ್ದಾರೆ.

ಹಲ್ಲೆ ಮಾಡಿದ ನಂತರ ಸೋಮಣ್ಣನವರ ಬೆಂಬಲಿಗರು ಮತ್ತು ಅಧಿಕಾರಿಗಳು ಆತನಿಗೆ ಮನಸೋಇಚ್ಛೆ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ. ಆತ ಕುಡಿದಿದ್ದ ಮತ್ತು ಆತನ ಬಳಿ ಚಾಕುವೊಂದು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

image description

Comments are closed.