ನಾಲ್ವರು ಕುಖ್ಯಾತ ಕಾರು ಕಳ್ಳರ ಬಂಧನ‌

11:13 AM, Friday, March 23rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mulki-thiefಮೂಲ್ಕಿ: ಪಣಂಬೂರು, ಸುರತ್ಕಲ್‌ ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಾಲ್ವರು ಕಾರು ಕಳ್ಳರನ್ನು ಮೂಲ್ಕಿ ಪೊಲೀಸರು ಮಂಗಳೂರಿನ ಸಿ.ಸಿ.ಬಿ. ಪೊಲೀಸರ ಜತೆಗೆ ಜಂಟಿ ಕಾರ್ಯಾಚರಣೆ ನಡೆಸಿ ರೂ. 50 ಲಕ್ಷ ಮೌಲ್ಯದ 5 ಕಾರುಗಳೊಂದಿಗೆ ಬಂಧಿಸಿದ್ದಾರೆ.

ಮೂಲ್ಕಿ ಪೊಲೀಸರು ಮೂಲ್ಕಿ ಬಪ್ಪನಾಡು ಚೆಕ್‌ ಪೋಸ್ಟ್‌ ಬಳಿ ಮಂಗಳೂರು ಸಿಸಿಬಿ ಪೊಲೀಸರ ಜತೆಗೆ ವಾಹನ ತಪಾಸಣೆ ಮಾಡುತಿದ್ದರು. ಆಗ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಕಳ್ಳತನ ಮಾಡಿದ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಆರೋಪಿ ಪಯಾಜ್‌ ನನ್ನು ಸಂಶಯಗೊಂಡ ಪೊಲೀಸರು ಪ್ರಶ್ನಿದರು. ಆತನಿಂದ ಕಳವಿನ ಮಾಹಿತಿ ದೊರೆತಾಕ್ಷಣ ಆತನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದರು. ಸುರತ್ಕಲ್‌ ಠಾಣಾ ವ್ಯಾಪ್ತಿಯ ಮುಕ್ಕದಲ್ಲಿ ಮೂವರು ಆರೋಪಿಗಳಾದ ಉಳ್ಳಾಲದ ರೋಹನ್‌ ಶೈಲೇಶ್‌ ಡಿ,ಸೋಜಾ, ಬಂಟ್ವಾಳದ ಡೇವಿಡ್‌ ಕ್ಲಿಂಟನ್‌ ಮತ್ತು ಮಂಗಳೂರು ವೆ‌ಲೆನ್ಸಿಯಾದ ಈಸ ರೋಶನ್‌ನನ್ನು ಬಂಧಿಸಿದರು.

ಫ‌ಯಾಜ್‌ ನಕಲಿ ಆರ್‌.ಸಿ. ಜಾಲದ ಆರೋಪಿ ಕುಕ್ಕಾಜೆ ಅಬೂಬಕ್ಕರ್‌ ಸಾದಿಕ್‌ನ ಸಹಚರನಾಗಿದ್ದು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ಕಾರ್ಯಾಚರಣೆಯಲ್ಲಿ ಪೋಲಿಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಮಾರ್ಗದರ್ಶನದಲ್ಲಿ ಉಪ ಆಯುಕ್ತ ಹನುಮಂತ ರಾಯ ಮತ್ತು ಉಮಾಪ್ರಕಾಶ್‌ ನಿರ್ದೇಶದಂತೆ ಪಣಂಬೂರು ಸಹಾಯಕ ಆಯುಕ್ತ ರಾಜೇಂದ್ರ ನೇತೃತ್ವದಲ್ಲಿ ಮೂಲ್ಕಿ ಇನ್ಸ್‌ ಪೆಕ್ಟರ್‌ ಅನಂತಪದ್ಮನಾಭ ಸಿ.ಸಿ.ಬಿ. ಇನ್ಸ್‌ ಪೆಕ್ಟರ್‌ ಶಾಂತಾರಾಮ್‌, ಪಿ.ಎಸ್‌. ಐ. ಶೀತಲ್‌ ಅಲಗೂರು, ಪಿ.ಎಸ್‌.ಐ. ಕಬ್ಟಾಲ್‌ ರಾಜ್‌, ಎ.ಎಸ್‌.ಐ. ಗಳಾದ ಚಂದ್ರ ಶೇಖರ ಮತ್ತು ಶಶಿಧರ ಶೆಟ್ಟಿ, ಸಿಬಂದಿ ಧರ್ಮೇಂದ್ರ, ಅಣ್ಣಪ್ಪ, ಸುರೇಶ್‌, ಮಹಮ್ಮದ್‌ ಹುಸೈನ್‌, ಬಸವರಾಜ, ಜಬ್ಟಾರ್‌, ರಾಜೇಂದ್ರ, ರಾಮ ಪೂಜಾರಿ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English