ಮೈಸೂರು: ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಕ್ಯಾತಮಾರನಹಳ್ಳಿಯ ದೀಪಕ್ (23) ಎಂಬಾಥನೇ ಆತ್ಮಹತ್ಯೆ ಮಾಡಿಕೊಂಡವ.
ದೀಪಕ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಹುಡುಗಿಯ ಮನೆಯವರಿಗೆ ಗೊತ್ತಾಗಿತ್ತು. ನೀನು ಪ್ರೀತಿಸುತ್ತಿರುವ ಹುಡುಗನನ್ನೇ ಮದುವೆಯಾಗು ಎಂದು ಯುವತಿಗೆ ಅವಳ ಮನೆಯವರು ಒಪ್ಪಿಗೆ ನೀಡಿದ್ದರು. ಈ ವಿಚಾರವನ್ನ ಯುವತಿ ದೀಪಕ್‌ಗೆ ತಿಳಿಸಿ, ಮದುವೆಯಾಗೋಣ ಎಂದು ಒತ್ತಾಯಿಸಿದ್ದಳು. ಆದರೆ ಈಗಲೇ ಮದುವೆ ಬೇಡ ಎಂದು ದೀಪಕ್ ನಿರಾಕರಿಸಿದ್ದ ಎನ್ನಲಾಗಿದೆ.
ಇದರಿಂದ ಯುವತಿಯ ಪೋಷಕರು ಉದಯಗಿರಿ ಠಾಣೆಗೆ ಲಿಖಿತ ದೂರು ನೀಡಿದ್ದರು. ಠಾಣೆಗೆ ದೀಪಕ್ ಹಾಗೂ ಆತನ ಪೋಷಕರನ್ನು ಕರೆಸಿದ ಪೊಲೀಸರು ಮದುವೆಯಾಗುವಂತೆ ಒಪ್ಪಿಸಿದ್ದರು. ಮೂರು ದಿನದೊಳಗೆ ಮದುವೆಯಾಗುತ್ತೇನೆಂದು ದೀಪಕ್ ಒಪ್ಪಿಕೊಂಡಿದ್ದ. ನಿನ್ನೆ ಪೋಷಕರು ಬೆಂಗಳೂರಿಗೆ ಹೋದಾಗ ರಾತ್ರಿ ಮನೆಯಲ್ಲೇ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹುಡುಗಿಯ ಮನೆಯವರು ಮದುವೆಯಾಗುವಂತೆ ಕಿರುಕುಳ ನೀಡಿದ್ದರಿಂದಲೇ ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ದೀಪಕ್ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಯುವತಿ ಹಾಗೂ ಆಕೆಯ ಪೋಷಕರ ವಿರುದ್ಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.
Click this button or press Ctrl+G to toggle between Kannada and English