ಮಂಗಳೂರು: ಕರಾವಳಿಯಲ್ಲಿ ವಿಧಾನಸಭಾ ಚುನಾವಣಾ ಅಖಾಡಾ ರಂಗೇರುತ್ತಿದೆ. ಕರಾವಳಿಯಲ್ಲಿ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಕರಾವಳಿ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ನಡುವೆ ಕರಾವಳಿಯ ಕಾಂಗ್ರೆಸ್ ಮುಖಂಡರು ಒಂದರ ಮೇಲೊಂದು ಎಡವಟ್ಟುಗಳನ್ನು ಮಾಡಿಕೊಳ್ಳುತಲೇ ಇದ್ದು ಚುನಾವಣೆಯಲ್ಲಿ ಇದು ಹಿನ್ನಡೆಯಾಗಿ ಪರಿಣಮಿಸಬಹುದೇ ಎಂಬ ಅನುಮಾನ ಕಾಡುತ್ತಿದೆ. ಒಂದೆಡೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಸಂದರ್ಭದಲ್ಲಿ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ನ ಮುಸ್ಲಿಂ ಮುಖಂಡರು ಭಾರೀ ಒತ್ತಡ ಹೇರಿದ್ದರು.
ಅದರೆ ಮೇಯರ್ ಆಗಿ ವೀರಪ್ಪ ಮೊಯ್ಲಿ ಸಂಬಂಧಿ ಭಾಸ್ಕರ್ ಮೊಯ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಇದಕ್ಕೆ ಮುಸ್ಲಿಂ ಮುಖಂಡರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರ ಈ ನಡೆ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಶಿಸಲಾಗಿತ್ತು. ಮುಸ್ಲಿಂ ಸಮುದಾಯಕ್ಕಿಲ್ಲ ಮೇಯರ್ ಸ್ಥಾನ, ಸಚಿವ ರೈ ವಿರುದ್ದ ಆಕ್ರೋಶ ಆದರೆ ಈಗ ಮತ್ತೆ ಕಾಂಗ್ರೆಸ್ನ ಮುಖಂಡರೊಬ್ಬರ ಹೇಳಿಕೆ ಕಾಂಗ್ರೆಸ್ ಪರ ಮತ ಚಲಾಯಿಸುವ ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಈ ರೀತಿಯ ಯಡವಟ್ಟಿಗೆ ಕಾರಣ.
ಮುಸ್ಲಿಮರಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ನವರು ಅವರನ್ನು ನಂಬಲು ಸಾದ್ಯವಿಲ್ಲ ಎಂದು ಹೇಳಿರುವ ಕವಿತಾ ಸನಿಲ್ ಅವರ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕವಿತಾ ಸನಿಲ್ ಈ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ. ಬಿಜೆಪಿ ಸ್ಟಾರ್ ಕ್ಯಾಂಪೇನರ್ ಯೋಗಿ ಸೋತು ಮಲಗಿಬಿಟ್ಟಿದ್ದಾರೆ: ರೈ ಸಚಿವ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಮಹಮ್ಮದ್ ಸೇರಿದಂತೆ ಇತರರು ಊಟ ಮಾಡುತ್ತಿದ್ದ ವೇಳೆ ಯಾವುದೋ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು.
ಈ ಸಂದರ್ಭ ಕವಿತಾ ಸನಿಲ್, ‘ನಿಮ್ಮವರೆಲ್ಲರನ್ನೂ ನಂಬಲು ಸಾಧ್ಯವಿಲ್ಲ. ನಿಮ್ಮವರಲ್ಲಿ ಹೆಚ್ಚಿನವರು ಎಸ್.ಡಿ.ಪಿ.ಐ ಗೆ ಸೇರಿದವರು ಎಂದು ಹೇಳಿದ್ದರು. ಸಚಿವ ಬಿ.ರಮಾನಾಥ ರೈ ಮುಂದೆ ಕವಿತಾ ಸನಿಲ್ ಹೀಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕವಿತಾ ಸನಿಲ್ ಅವರ ಈ ಹೇಳಿಕೆ ಕಾಂಗ್ರೆಸ್ ಪರ ಮತ ಚಲಾಯಿಸುವ ಮುಸ್ಲಿಂ ಸಮುದಾಯದ ಒಂದು ವರ್ಗವನ್ನು ಕೆರಳಿಸಿದೆ.
Click this button or press Ctrl+G to toggle between Kannada and English