ಮುಂಬೈ: ಉದ್ಯಮಿಯೊಬ್ಬರು ನನಗೆ ಆಗಾಗ್ಗೆ ಕರೆ ಮಾಡಿ ಹಿಂಸಿಸುತ್ತಿರುವುದಲ್ಲದೆ, ಜೀವಬೆದರಿಕೆ ಕೂಡಾ ಹಾಕಿದ್ದಾರೆಂದು ಕೆಲವು ದಿನಗಳ ಹಿಂದೆ ಬಾಲಿವುಡ್ನ 65 ವರ್ಷದ ಹಿರಿಯ ನಟಿ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ಆ ಉದ್ಯಮಿ ವಿರುದ್ಧ ಜುಹು ಪೊಲೀಸ್ ಸ್ಟೇಷನ್ನಲ್ಲಿ ನಟಿ ಅತ್ಯಾಚಾರದ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ ಪೊಲೀಸರು ನಿನ್ನೆ ಆ ಉದ್ಯಮಿಯನ್ನು ಬಂಧಿಸಿದ್ದು ಇಂದು ಕೋರ್ಟ್ಗೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.
2011 ರಲ್ಲಿ 38 ವರ್ಷದ ಉದ್ಯಮಿ ಸರ್ಫರಾಜ್ ಎಂಬಾತ ನಟಿಗೆ ಪರಿಚಯವಾಗಿದ್ದು, ಕೆಲವು ದಿನಗಳ ನಂತರ ಆಕೆಯ ಸುಮಾರು 15 ಕೋಟಿ ರೂ. ಬೆಲೆ ಬಾಳುವ ಒಡವೆಗಳನ್ನು ತನಗೆ ನೀಡುವಂತೆ ಕೇಳಿದ್ದ ಎನ್ನಲಾಗಿದೆ. ಆದರೆ ಒಡವೆಗಳನ್ನು ನೀಡಲು ನಟಿ ನಿರಾಕರಿಸಿದಾಗ ಸರ್ಫರಾಜ್ ನಕಲಿ ಡಾಕ್ಯುಮೆಂಟ್ಸ್ ತಯಾರಿಸಿ ಹಿರಿಯ ನಟಿಯ ಹೆಸರಿನಲ್ಲಿದ್ದ 5 ಫ್ಲಾಟ್ಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ.
ಇದಾದ ನಂತರ ಆತ 65 ವರ್ಷದ ನಟಿ ಮೇಲೆ ಮೇಲೆ ಅತ್ಯಾಚಾರವೆಸಗಿ ಮತ್ತೆ ಫೇಕ್ ಡಾಕ್ಯುಮೆಂಟ್ ಬಳಸಿ ಇಬ್ಬರಿಗೂ ಮದುವೆ ಆಗಿದೆ ಎಂದು ಪುಕಾರು ಹಬ್ಬಿಸಿದ್ದ ಎಂದು ಆರೋಪಿಸಲಾಗಿದೆ.
ಇಷ್ಟೇ ಅಲ್ಲದೆ ತನಗೆ ವಿರುದ್ಧವಾಗಿ ನಡೆದುಕೊಂಡರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು ಈ ಸಂಬಂಧ ನಟಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಸರ್ಫರಾಜನ್ನು ಬಂಧಿಸಿದ್ದು 376, 420, 406, 465, 467, 468, 469, 471, 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
Click this button or press Ctrl+G to toggle between Kannada and English