ಕುಂದಾಪುರ: ಕುಂದಾಪುರದ ಲಾಡ್ಜ್‌ನಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅಜರ್‌ಖಾನ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, 50 ಸಾವಿರ ರೂ . ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿಕ್ಷೆಗೆ ಗುರಿಯಾಗಿರುವ ಅಜರ್‌ಖಾನ್ ಅಲಿಯಾಸ್ ಅಜಯ್ ಬಾಬು ಗುಜರಾತ್ ಮೂಲದವ. ಈತ ಗಂಗೊಳ್ಳಿಯ ಲಲಿತಾ ದೇವಾಡಿಗ ಎಂಬ ವೃದ್ಧೆಯನ್ನು 2015 ಏಪ್ರಿಲ್ 15ರಂದು ಕೊಲೆ ಮಾಡಿದ್ದ. ವೃದ್ಧೆ ಲಲಿತಾ ಅವರ ಮಗಳ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಅಜರ್ ಈ ಕೃತ್ಯವೆಸಗಿದ್ದ.
ಲಲಿತಾರನ್ನು ಲಾಡ್ಜಿಗೆ ಕರೆಸಿಕೊಂಡಿದ್ದ ಅಜರ್ ಬಳಿಕ ಕುತ್ತಿಗೆಗೆ ವೈರ್ ಬಿಗಿದು ಕೊಂದಿದ್ದ. ಕೊಲೆ ನಂತರ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಜರ್‌ನನ್ನು ಮುಂಬೈಯಲ್ಲಿ ಬಂಧಿಸಿ ಕುಂದಾಪುರಕ್ಕೆ ಕರೆತಂದಿದ್ದರು. ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಟಕಟಿಸಿದೆ. ನ್ಯಾಯಾಧೀಶ ಪ್ರಕಾಶ್ ಖಂಡೇರಿಯವರು ಜೀವಾವಧಿ ಶಿಕ್ಷೆ ಆದೇಶ ಪ್ರಕಟಿಸಿದರು. ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.
Click this button or press Ctrl+G to toggle between Kannada and English