ಅಲ್ಪಸಂಖ್ಯಾತರ ಓಲೈಕೆಗೆ ಕೇಂದ್ರ ಸರ್ಕಾರ ಯತ್ನ ಆರೋಪ, ಪ್ರತಿಭಟನೆ

12:47 PM, Tuesday, March 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

hindu-janagrateಮಂಗಳೂರು: ಹಜ್ ಯಾತ್ರೆ ಅನುದಾನ ರದ್ದುಗೊಳಿಸಿ ವಿಮಾನ ಪ್ರಯಾಣದಲ್ಲಿ ಅಗಾಧ ರಿಯಾಯಿತಿ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಒಲೈಕೆ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿಯವರು ಪುತ್ತೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಜನಾರ್ಧನ ಗೌಡ, ಸುಪ್ರೀಂ ಕೋರ್ಟ್‌ನ ಆದೇಶವಿದ್ದರೂ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಅನುದಾನವನ್ನು ರದ್ದು ಪಡಿಸಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಇದೀಗ ಅನುದಾನವನ್ನು ರದ್ದುಪಡಿಸಿದ್ದರೂ ಹಜ್‌ ಯಾತ್ರಿಕರಿಗೆ ವಿಮಾನಯಾನದಲ್ಲಿ ಶೇ. 45 ರವರೆಗೆ ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿ ಅಲ್ಪಸಂಖ್ಯಾತರ ಓಲೈಕೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಅಮರನಾಥ ಯಾತ್ರೆ, ಕುಂಭಮೇಳ ಯಾತ್ರಿಕರಿಗೆ ರಿಯಾಯಿತಿ ಅನುದಾನವಿಲ್ಲ. ಬದಲಾಗಿ ದರ ಏರಿಕೆ ಮಾಡುವ ಮೂಲಕ ಯಾತ್ರಿಕರ ಸಂಖ್ಯೆಯನ್ನು ಕಡಿಮೆ ಮಾಡಿ ಸರ್ಕಾರ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ. ಅನ್ನದಾತ ರೈತ ಸಂಕಷ್ಟದಲ್ಲಿದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಅಲ್ಪಸಂಖ್ಯಾತರ ಒಲೈಕೆಯ ಮೂಲಕ ಸಂವಿಧಾನ ವಿರೋಧಿ, ರಾಷ್ಟ್ರ ವಿರೋಧಿ ಕೆಲಸ ಮಾಡುತ್ತಿದೆ ಎಂದು ದೂರಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English