ಮೂಡುಬಿದಿರೆ: ದೇಶದ ಅತಿ ದೊಡ್ಡ ತರಬೇತಿ ಸೊಸೈಟಿ ಎಂಬ ಹೆಗ್ಗಳಿಕೆಯಿರುವ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್‍ನ 53 ನೇ ಶಾಖೆಯು (ಮಂಗಳೂರು-ಉಡುಪಿ) ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಐಎಸ್‍ಟಿಡಿ ಬೆಂಗಳೂರು ಶಾಖೆಯ ಅಧ್ಯಕ್ಷೆ ಡಾ.ಮೀರಾ ವೆಂಕಟ್ ಭಾಗವಹಿಸಿ, ಆಳ್ವಾಸ್‍ನಲ್ಲಿ ಐಎಸ್‍ಟಿಡಿ ಶಾಖೆ ಪ್ರಾರಂಭವಾಗುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ.ಸಿ ಸುಜಿತ್ ಮಾತನಾಡಿ , ವಿದ್ಯಾರ್ಥಿಗಳು ಮಾನವ ಸಂಬಂಧಗಳನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸಬೇಕೆಂದರು.
ಐಎಸ್‍ಟಿಡಿ ಸಲಹೆಗಾರ ವರಹಸ್ವಾಮಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಶುಭ ಹಾರೈಸಿದರು.
ಮಂಗಳೂರು – ಉಡುಪಿ ಶಾಖೆಯ ಅಧ್ಯಕ್ಷ , ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಡೀನ್ ಪೆÇ್ರ. ಪಿ ರಾಮಕೃಷ್ಣ ಚಡಗ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುದತ್ತ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ಧರ್ಮಾನಂದ್ ವಂದಿಸಿದರು.
Click this button or press Ctrl+G to toggle between Kannada and English