ಅಂಬಾನಿ ಕುಡಿಯ ವಿವಾಹ ನಿಶ್ಚಿತಾರ್ಥ… ಶುಭ ಹಾರೈಸಲು ಆಗಮಿಸಿದ ಗಣ್ಯಾತಿಗಣ್ಯರು

6:23 PM, Tuesday, March 27th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

akash-ambaniಮುಂಬೈ : ಕಳೆದ ಶನಿವಾರ ಗೋವಾದಲ್ಲಿ ರಿಲಾಯನ್ಸ್ ಮುಖ್ಯಸ್ಥ ಮುಖೇಶ್‌ ಅಂಬಾನಿ ಪುತ್ರ ಆಕಾಶ್‌ ಅಂಬಾನಿ ತನ್ನ ಗೆಳತಿ ಶ್ಲೋಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ಸಂತೋಷವನ್ನು ಹಂಚಿಕೊಳ್ಳಲು ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಸೋಮವಾರ ಸಂಜೆ ಗಣ್ಯರಿಗಾಗಿ ತಮ್ಮ ‘ ಅಂಟಿಲಿಯಾ’ ಗೃಹದಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ಈ ಪಾರ್ಟಿಗೆ ಬಾಲಿವುಡ್ ಹಾಗೂ ಇನ್ನಿತರ ಸೆಲಬ್ರಿಟಿಗಳು ಆಗಮಿಸಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳಿಗೆ ಶುಭ ಹಾರೈಸಿದರು.

akash-ambani.2ಪಾರ್ಟಿಗೆ ಶಾರುಖ್ ಖಾನ್ ಹಾಗೂ ಕತ್ರೀನಾ ಮೊದಲು ಆಗಮಿಸಿ ಜೋಡಿಗಳಿಗೆ ಶುಭ ಕೋರಿದರು. ಚಿಕ್ ಪೀಚ್ ಬಣ್ಣದ ಡ್ರೆಸ್‌‌ನಲ್ಲಿ ಕತ್ರೀನಾ ಮಿಂಚುತ್ತಿದ್ದರೆ ಶಾರುಖ್ ಕಪ್ಪು ಸೂಟ್‌‌ ಧರಿಸಿ ಆಗಮಿಸಿದ್ದರು. ಇವರೊಂದಿಗೆ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌, ಕಿರಣ್‌ ರಾವ್‌‌‌, ನತಾಶಾ ಪೂನಾವಲ್ಲಾ ಕೂಡಾ ಪಾರ್ಟಿಗೆ ಆಗಮಿಸಿದ್ದರು. ಇನ್ನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ತನ್ನ ಪುತ್ರಿ ಆರಾಧ್ಯ ಬಚ್ಚನ್ ಜೊತೆ ಈ ಭೋಜನಕೂಟಕ್ಕೆ ಆಗಮಿಸಿದ್ದರು.

ಶನಿವಾರ ಸಂಜೆ ತಮ್ಮ ಧೀರ್ಘಕಾಲದ ಗೆಳತಿ ಶ್ಲೋಕಾಗೆ ಗೋವಾದಲ್ಲಿ ನಡೆದ ಸರಳ ನಿಶ್ಚಿತಾರ್ಥ ಸಮಾರಂಭದಲ್ಲಿ ಉಂಗುರ ತೊಡಿಸಿ ಆಕಾಶ್ ಅಂಬಾನಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಭಾನುವಾರ ರಾಮನವಮಿಯಂದು ಅಂಬಾನಿ ಕುಟುಂಬ ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿತ್ತು. ರೋಸಿ ಬ್ಲೂ ಡೈಮಂಡ್ಸ್ ನ ಮುಖ್ಯಸ್ಥ ರುಸ್ಸೆಲ್ಲ್ ಮೆಹ್ತಾ ಹಾಗೂ ಮೋನಾ ಅವರ ಪುತ್ರಿ ಶ್ಲೋಕಾ ಅವರನ್ನು ಆಕಾಶ್ ಇದೇ ವರ್ಷ ಮದುವೆಯಾಗಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English