ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣ…!

11:38 AM, Thursday, March 29th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Sukhanandaಮಂಗಳೂರು: ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ 17 ಆರೋಪಿಗಳನ್ನು ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ.

ನವಾಜ್, ನೌಷಾದ್, ಶಾಕಿರ್, ಮೊಹಮ್ಮದ್ ಅಜೀಜ್, ಮೊಹಮ್ಮದ್ ರಫೀಕ್, ಅಬ್ದುಲ್ ಖಾದರ್ ಆಲಿ, ಪಿ.ಕೆ.ಅಯೂಬ್, ಮೊಹಮ್ಮದ್ ಅಶ್ರಫ್, ಫಾತಿಮಾ ಝೊಹರಾ, ಸಲೀಂ, ಖಲಂದರ್ ಬಜಪೆ, ರೆಹಮತ್ ಖಲಂದರ್, ಅಜೀಜ್ ಯಾನೆ ಯುರೋಪಿಯನ್ ಅಜೀಜ್, ನಿಜಾಮುದ್ದೀನ್, ಮೊಹಮ್ಮದ್ ಯಾನೆ ಸಾದಾ ಮೊಹಮ್ಮದ್, ಅಪ್ರೋಜ್, ನಾಸಿರ್ ಕೊಲೆ ಪ್ರಕರಣದಲ್ಲಿ ದೋಷ ಮುಕ್ತಗೊಂಡವರು.

ಈ ಪ್ರಕರಣದಲ್ಲಿ ಒಟ್ಟು 23 ಆರೋಪಿಗಳನ್ನು ಗುರುತಿಸಲಾಗಿತ್ತು. ಇಬ್ಬರು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಕೊಲೆಯಾಗಿದ್ದಾರೆ. ಇಬ್ಬರು ತಲೆಮರೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಒಟ್ಟು 72 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಕೊಲೆ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English