ಬೆಂಗಳೂರು: ದೇಶದ ದೊಡ್ಡ ಬ್ಯಾಂಕಿಂಗ್ ಹಗರಣ ಎದುರಿಸುತ್ತಿರುವ ಮೆಹುಲ್ ಚೋಕ್ಸಿಯಿಂದ ಸುಮಾರು 85 ಕೋಟಿ ರೂಪಾಯಿ ವಂಚನೆಗೊಳಾಗಿದ್ದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮಂಗಳೂರು ಮೂಲದ ಕರ್ನಾಟಕ ಬ್ಯಾಂಕ್ ಮಾಹಿತಿ ನೀಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,450 ಕೋಟಿ ರೂಪಾಯಿ ವಂಚಿಸಿ ಮೆಹುಲ್ ಚೋಕ್ಸಿ ಮತ್ತವರ ಸಂಬಂಧಿ ನೀರವ್ ಮೋದಿ ದೇಶ ತೊರೆದಿದ್ದಾರೆ. ಇದೀಗ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜೇಮ್ಸ್ 86.47 ಕೋಟಿ ರೂಪಾಯಿ ವಚಿಸಿದೆ ಎಂದು ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ.
ಗೀತಾಂಜಲಿ ಜೇಮ್ಸ್ ಸಂಸ್ಥೆಯು ನಿಧಿ ಆಧಾರಿತ ಬಂಡವಾಳದ ಮೇಲೆ 86.47 ಕೋಟಿ ಪಡೆದು ವಂಚಿಸಿದೆ ಎಂದು ಆರ್‌ಬಿಐಗೆ ವರದಿ ಕೊಟ್ಟಿದ್ದೇವೆ ಎಂದು ಕರ್ನಾಟಕ ಬ್ಯಾಂಕ್‌ನ ಕಾರ್ಯದರ್ಶಿ ಪ್ರಸನ್ನ ಪಾಟೀಲ್ ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ದೇಶ ತೊರೆದಿದ್ದಾರೆ. ಇವರ ವಂಚನೆ ಹಗರಣದ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿವೆ.
Click this button or press Ctrl+G to toggle between Kannada and English