ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಖ್ಯಾತ ಮಂಗಳೂರು ದಸರಾಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಹಾಗೂ ಸಾಗರೋತ್ತರ ಭಾರತೀಯರ ವ್ಯವಹಾರಗಳ ಸಚಿವ ವಯಲಾರ್ ರವಿ ಅವರು ರವಿವಾರ ಚಾಲನೆ ನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿ ಸಾರಿರುವ ಸಂದೇಶ ವಿಶ್ವಮಾನ್ಯವಾಗಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬುದಾಗಿ ಏಕತೆಯ ಸಂದೇಶ ನಮ್ಮೆಲ್ಲರ ಶಕ್ತಿ. ನಾನು ಬಾಲ್ಯದಿಂದಲೂಅವರ ಸಂದೇಶ ನನ್ನ ಚಿಂತನೆಗಳನ್ನು ಕೇಳುತ್ತಿದ್ದೆ. ಚಿಕ್ಕಂದಿನಲ್ಲಿ ವರ್ಕಳ ಶಿವಗಿರಿ ಮಠಕ್ಕೆ ಹೋಗುತ್ತಿದ್ದ ಪ್ರವಚನಗಳು ಇಂದಿಗೂ ನನ್ನ ಮೇಲೆ ಗಾಢ ಪ್ರಭಾವ ಬೀರಿದೆ ಎಂದರು.
ಮಂಗಳೂರು ವಿಮಾನನಿಲ್ದಾಣವನ್ನು ಅಂತಾರಾಷ್ಟಿಯವಾಗಿ ಮಾರ್ಪಡಿಸುವುದು ಅತ್ಯಾವಶ್ಯವಾಗಿದೆ. ಇದಕ್ಕಾಗಿ ಕೆಲವು ರೂಪು ರೇಶೆಗಳನ್ನು ಪೂರೈಸಬೇಕಾಗಿದ್ದು ಅವುಗಳನ್ನು ಶೀಘ್ರದಲ್ಲೆ ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.
ಬಿ.ಜನಾರ್ದನ ಪೂಜಾರಿಯವರು ಮಾತನಾಡಿ ಶ್ರೀ ಕ್ಷೇತ್ರ ಶ್ರದ್ಧಾ ಭಕ್ತಿಯ ತಾಣವಾಗಿ, ಶಾಂತಿ ಸಾಮರಸ್ಯದ ಕೇಂದ್ರವಾಗಿ ಮೆರೆಯುತ್ತಿದೆ ಎಂದರು. ಗುರುಗಳ ಸಂದೇಶಗಳಡಿಯಲ್ಲಿ ಸಾಗುತ್ತಾ ಕ್ಷೇತ್ರ ಪಾವನವಾಗಿದೆ ಎಂದ್ರು. ವಯಲಾರ್ ರವಿಯವರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ರಾಜಕಾರಣಿ ಎಂದು ಬಣ್ಣಿಸಿದರು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಹೊಟೇಲ್ ದೀಪಾ ಕಂಫರ್ಟ್ಸ್ ಆಡಳಿತ ನಿರ್ದೇಶಕಿ ಉರ್ಮಿಳಾ ರಮೇಶ್, ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಮುಖ್ಯ ಅತಿಥಿಗಳಾಗಿದ್ದರು.
ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಟ್ರಸ್ಟಿಗಳಾದ ಬಿ.ಕೆ.ತಾರನಾಥ್, ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ ಅವರು ಉಪಸ್ಥಿತರಿದ್ದರು. ಖಜಾಂಚಿ ಪದ್ಮರಾಜ್ ಆರ್. ಅವರು ಸ್ವಾಗತಿಸಿದರು. ಎಂಪಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
Click this button or press Ctrl+G to toggle between Kannada and English