ರಾಮನಗರ: ರಾಜ್ಯ ವಿಧಾನಸಭಾ ಸಾರ್ವತಿಕ ಚುನಾವಣೆಯ ದಿನಾಂಕ ಘೊಷಣೆಯಾಗುತ್ತಿದಂತೆ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿವೆ.
ಮಾಗಡಿಯಲ್ಲಿ ಕಳೆದ ಭಾನುವಾರ ಜೆಡಿಎಸ್ ಪಕ್ಷ ಪಟ್ಟಣದ ನಾಡಪ್ರಭು ಕೆಂಪೇಗೌಡರ ಕೋಟೆ ಮೈದಾನದಲ್ಲಿ ವಿಕಾಸ ಪರ್ವ ಸಮಾವೇಶ ಏರ್ಪಡಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿತ್ತು. ಈಗ ಕಾಂಗ್ರೆಸ್ ಕೂಡ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಏಪ್ರಿಲ್ 4 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಗಡಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿಪ್ರದರ್ಶನ ವನ್ನು ತೋರಿಸಲು ಏ. 4 ರಂದು ಮುರ್ಹೂತ ಫಿಕ್ಸ್ ಮಾಡಿದೆ. ಪಟ್ಟಣದ ಕೆಂಪೇಗೌಡ ಕೋಟೆ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರೆಸಿ ಸುಮಾರು 50 ಸಾವಿರ ಮಂದಿಯನ್ನು ಸೇರಿಸಿ ಶಕ್ತಿ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.
ಜೆಡಿಎಸ್ ತೊರೆದ ಹೆಚ್.ಸಿ.ಬಾಲಕೃಷ್ಣ ಜೆಡಿಎಸ್‌ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಜೊತೆಗೆ ಬಾಲಕೃಷ್ಣಗೆ ಕಾಂಗ್ರೆಸ್ ಟಿಕೆಟ್ ಅಧಿಕೃತಗೊಂಡಿದೆ. ಜೆಡಿಎಸ್‌ನಿಂದ ಎ.ಮಂಜುನಾಥ್ ಕಣಕ್ಕಿಳಿಯುತ್ತಿದ್ದು, ಬಿಜೆಪಿ ಪಕ್ಷದಿಂದ ಟಿಕೆಟ್ ಯಾರಿಗೊಂದು ಪ್ರಕಟವಾಗಿಲ್ಲ.
ಮಾಗಡಿಯಿಂದ ನಾಲ್ಕು ಬಾರಿ ಗೆದ್ದಿರುವ ಹೆಚ್.ಸಿ.ಬಾಲಕೃಷ್ಣ ಅವರು ಈ ಬಾರಿಯ ಚುನಾವಣೆಯಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಲು ಸಾಕಷ್ಟು ಕಸರತ್ತು ನಡೆಸ್ತಿದ್ದಾರೆ.
ಇನ್ನು ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಒಂದು ಸುತ್ತಿನ ಪಕ್ಷದ ಮುಖಂಡರ ಸಭೆಯನ್ನ ನಡೆಸಿದ್ದು, ಹೆಚ್ಚು ಜನರನ್ನ ಸೇರಿಸಿ, ಜೆಡಿಎಸ್ ವಿಕಾಸ ಪರ್ವ ಸಮಾವೇಶಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಉತ್ಸುಕತೆಯಿಂದ ಸಂಘಟನೆಗೆ ಇಳಿದಿದ್ದಾರೆ.
Click this button or press Ctrl+G to toggle between Kannada and English