ಬೆಂಗಳೂರು: ಅಗರಬತ್ತಿ ಪ್ರಚಾರಕ್ಕೆ ಅನುಮತಿ ಪಡೆಯದೇ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 75 ಲಕ್ಷ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ನಟ ಗಣೇಶ್‌ಗೆ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ. 2008ರಲ್ಲಿ ಈ ಬಗ್ಗೆ ನಟ ಗಣೇಶ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ತಮ್ಮ ಅನುಮತಿ ಪಡೆಯದೇ ಮೋಕ್ಷ್ ಅಗರಬತ್ತಿ ಕಂಪನಿ ಚೆಲುವಿನ ಚಿತ್ತಾರ ಚಿತ್ರದ ತಮ್ಮ ಪೋಸ್ಟರ್ ಬಳಸಿಕೊಂಡಿದೆ ಎಂದು ಆರೋಪಿಸಿ ಗಣೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಜಾಹೀರಾತು ರೂಪದಲ್ಲಿ ಗಣೇಶ್ ಫೋಟೋ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ನಟ ಗಣೇಶ್‌ಗೆ 75 ಲಕ್ಷ ಪರಿಹಾರ ನೀಡುವಂತೆ ಮೋಕ್ಷ್ ಕಂಪನಿಗೆ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಈ ವಿಚಾರವಾಗಿ ನಟ ಗಣೇಶ್ ಮತ್ತು ನಿರ್ದೇಶಕ ಎಸ್ ನಾರಾಯಣ್ ಮಧ್ಯೆ ವಿವಾದಕ್ಕೂ ಕಾರಣವಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ವೇಳೆ ಎಸ್ ನಾರಾಯಣ್ ಕೂಡ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ 75 ಲಕ್ಷ ರೂ. ಪರಿಹಾರ ನೀಡುವಂತೆ ಗಣೇಶ್ ಕೋರ್ಟ್ ಮೊರೆ ಹೋಗಿದ್ದರು.
Click this button or press Ctrl+G to toggle between Kannada and English