ಮಂಗಳೂರು: ಬದುಕು ಬಹಳ ದೊಡ್ಡದು.ಪ್ರಶಸ್ತಿಗಳಿಗಿಂತ ಬದುಕುದೊಡ್ಡದುಎಂದು ನಾನು ಭಾವಿಸಿದವನು.ಬದುಕಿನಲ್ಲಿ ನಾವು ಏನು ಸಾಧನೆ ಮಾಡಬೇಕಾದರೂಕೂಡಾ ನಮ್ಮ ಮಹತ್ವಾಕಾಂಕ್ಷೆಯನ್ನು ನಾವು ಮರೆಯಬಾರದು. ನಮ್ಮಪ್ರಾಮಾಣಿಕತೆಯನ್ನು ಬಿಡಬಾರದು. ಒಂದುರೀತಿಯಲ್ಲಿಒಬ್ಬ ಬರಹಗಾರನಿಗೆಅತ್ಯುತ್ತಮ ಕೃತಿಗಳನ್ನು ಬರೆಯುವುದೇಅಥವಾತನ್ನಎಲ್ಲಾ ಅನುಭವಗಳನ್ನು ಕೂಡಾಅದನ್ನುಅಭಿವ್ಯಕ್ತಿ ರೂಪಕೊಟ್ಟುಅದನ್ನು ಸಾಹಿತ್ಯ ಕೃತಿಗಳನ್ನಾಗಿ ಮಾರ್ಪಡಿಸತಕ್ಕಂತದ್ದೇ ಅವನ ಮಹತ್ವಕಾಂಕ್ಷೆ.
ಅದು ಅವನ ಕಾಯಕ.ನನಗೆ ಬರವಣಿಗೆಅನ್ನುವುದುಒಂದುತಪಸ್ಸು.1960ನೇ ಇಸವಿಯಲ್ಲಿ ಬರೆಯಲು ಪ್ರಾರಂಭಿಸಿದೆ.೬೦ರ ಸುಮಾರಿಗೆ ನನ್ನ ಮೂರು ಕವಿತೆಗಳು ಆಕಾಶವಾಣಿಯಲ್ಲಿ ಪ್ರಸಾರವಾಯಿತು.
ಆಗಿನ ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟಗೊಂಡವು.ಬರೆಯುತ್ತಾ ಹೋದೆ, ಬೆಳೆಯುತ್ತಾ ಹೋದೆ, ಕನ್ನಡವನ್ನೇ ನಿಚ್ಛಳವಾಗಿ ಬಳಸುತ್ತಾ ಹೋದೆ.ನನ್ನ ಬದುಕಿನ ಎಳೆಎಳೆಯು ಕೂಡಾ ನನ್ನ ಬರವಣಿಗೆಯಲ್ಲಿದೆ.ಲೇಖಕ ತನ್ನ ಬದುಕನ್ನಷ್ಟೇಅನಾವರಣ ಮಾಡಿದರೆ ಸಾಲದು, ಸುತ್ತಣ ಸಮಾಜವನ್ನುಕೂಡಾ ಅವನು ಗಂಭೀರವಾಗಿ ಗಮನಿಸಬೇಕು.ಸಮಾಜದಲ್ಲಿರತಕ್ಕಂತಹಎಲ್ಲಾ ಓರೆಕೋರೆಗಳನ್ನು ಗಮನಿಸಬೇಕು.ಸಾಹಿತಿ ಸಮಾಜಮುಖಿಯಾಗಿರಬೇಕುಎಂದು ಪದ್ಮಶ್ರೀ ಪುರಸ್ಕೃತಡಾ.ದೊಡ್ಡರಂಗೇಗೌಡಅವರುಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. ದೆಹಲಿ ಕರ್ನಾಟಕ ಸಂಘ ಏಪ್ರಿಲ್ 1ರಂದು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿಡಾ. ದೊಡ್ಡರಂಗೇಗೌಡಅವರಿಗೆಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿತ್ತು.
ಮುಂದುವರಿದು ಮಾತನಾಡುತ್ತಡಾ.ದೊಡ್ಡರಂಗೇಗೌಡಅವರು ’ಇವತ್ತುದೆಹಲಿ ಕರ್ನಾಟಕ ಸಂಘ ದೊಡ್ಡ ಶಕ್ತಿಯಾಗಿ ಬೆಳೆದಿದೆ’ ಇಲ್ಲಿಗೆ ಬರದೇಇರತಕ್ಕಂತಹಕನ್ನಡಿಗಇಲ್ಲವೇಇಲ್ಲ. ಕನ್ನಡಿಗಇಲ್ಲಿ ಬರಲಿಲ್ಲ ಅಂದರೆ ಅವನಿಗೆ ನಷ್ಟ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಂಗ ನಿರ್ದೇಶಕಶ್ರೀ ಎಂ.ಎಸ್. ಸತ್ಯುಅವರು ಮಾತನಾಡುತ್ತ ನನ್ನ ಮಾಧ್ಯಮ ನಾಟಕ ಮತ್ತು ಸಿನೇಮಾ.ಡಾ. ದೊಡ್ಡರಂಗೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದುಬಹಳ ಸಂತೋಷತಂದಿದೆಎಂದರು. ಇವರನ್ನು ಸಂಘದ ಪರವಾಗಿಅಭಿನಂದಿಸಲಾಯಿತು.
ವಸಂತ ಶೆಟ್ಟಿ ಬೆಳ್ಳಾರೆಯವರು ಮಾತನಾಡುತ್ತಅಬ್ಬಕಕುರಿತಾಗಿ ಹಿಂದಿಯಲ್ಲಿ ಮತ್ತಿತರ ಭಾಷೆಯಲ್ಲಿ ನಾಟಕಗಳು ಆಗಬೇಕು.
ಇದೇ ಸಂದರ್ಭದಲ್ಲಿ ಪ್ರಸ್ತುತಗೊಂಡಶ್ರೀ ಎಂ.ಎಸ್. ಸತ್ಯು ನಿರ್ದೇಶನದಗುಲ್ ಏ ಬಕಾವಲಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜ ಅವರು ನಿರೂಪಿಸಿದರು.ಡಾ. ಅಹಲ್ಯಾ ಚಿಂತಾಮಣಿ, ಹಿರಿಯಕಲಾವಿದ ಶ್ರೀ ಭೀಮರಾವ್ ಮುರಗೋಡಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English